Publish Date: Thu, 07 Dec 2017 (09:28 IST)
Updated Date: Thu, 07 Dec 2017 (09:30 IST)
ಬೆಂಗಳೂರು: ಮಂಡ್ಯ ಕ್ಷೇತ್ರದಲ್ಲಿ ನಟಿ ರಮ್ಯಾಗೆ ಟಿಕೆಟ್ ಕೊಡಲಾಗುತ್ತದೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಅಸಮಾಧಾನಗೊಂಡಿರುವ ಹಿರಿಯ ನಟ, ಶಾಸಕ ಅಂಬರೀಷ್ ಅದನ್ನು ಈ ರೀತಿ ತೋರಿಸಿಕೊಂಡರೇ?!
ನಿನ್ನೆ ಮಂಡ್ಯ ವಿಭಾಗದ ಕಾಂಗ್ರೆಸ್ ನಾಯಕರ ಜತೆ ರಾಜ್ಯ ಉಸ್ತುವಾರಿ ಕೆಸಿ ವೇಣುಗೋಪಾಲ್ ಸಭೆ ನಡೆಸಿದ್ದರು. ಆದರೆ ಈ ಸಭೆಗೆ ಅಂಬರೀಷ್ ಗೈರಾಗಿರುವುದು ಹಲವು ಊಹಾಪೋಹಗಳಿಗೆ ಕಾರಣವಾಗಿದೆ.
ಖಡಕ್ ಸೂಚನೆಯಿದ್ದರೂ ಸೊಪ್ಪು ಹಾಕದ ಅಂಬರೀಷ್ ಸಭೆಯಿಂದ ದೂರವುಳಿದಿರುವುದು ರಮ್ಯಾ ಸ್ಪರ್ಧೆ ವಿಚಾರದಲ್ಲಿ ಉಂಟಾದ ಅಸಮಾಧಾನದ ಕಾರಣಕ್ಕೆ ಎಂಬ ಸುದ್ದಿ ಹಬ್ಬಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ