Publish Date: Fri, 12 Oct 2018 (13:59 IST)
Updated Date: Fri, 12 Oct 2018 (14:05 IST)
ಶಿವಮೊಗ್ಗ : ಸಚಿವ ಎನ್. ಮಹೇಶ್ ರಾಜೀನಾಮೆ ನೀಡಿರುವ ಹಿನ್ನಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸಚಿವ ಎನ್. ಮಹೇಶ್ ರಾಜೀನಾಮೆಗೂ ಬಿಜೆಪಿಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎನ್ . ಮಹೇಶ್ ಅವರು ಮಾಯಾವತಿ ಪಕ್ಷಕ್ಕೆ ಸೇರಿದವರು. ಅವರ ರಾಜೀನಾಮೆಯ ಹಿಂದೆ ಬಿಜೆಪಿಯ ಕೈವಾಡವಿಲ್ಲ. ಅವರ ರಾಜೀನಾಮೆಗೆ ವಿಶೇಷ ಕಾರಣ ಏನೂ ಎಂಬುದು ತಿಳಿದಿಲ್ಲ. ರಾಜೀನಾಮೆ ನೀಡಿರುವುದು ಸಚಿವ ಎನ್. ಮಹೇಶ್ ಅವರ ವೈಯಕ್ತಿಕವಾದ ವಿಚಾರ ಎಂದು ಹೇಳಿದ್ದಾರೆ.
ನಾವು ಪ್ರತಿಪಕ್ಷದ ಸ್ಥಾನದಲ್ಲಿ ಇದ್ದೇವೆ. ಪ್ರತಿಪಕ್ಷದ ಕೆಲಸ ಮಾಡುತ್ತೇವೆ. ಯಾವುದಾದರೂ ಕಾರಣಕ್ಕೆ ಸರ್ಕಾರ ಬಿದ್ರೆ ನೋಡೋಣ ಎಂದರು. ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.