Publish Date: Fri, 12 Oct 2018 (11:29 IST)
Updated Date: Fri, 12 Oct 2018 (11:31 IST)
ಶಿಕ್ಷಣ ಸಚಿವ ಎನ್. ಮಹೇಶ್ ರಾಜೀನಾಮೆ ನೀಡಿರುವ ಬಗ್ಗೆ ನನಗೆ ಮಾಹಿತಿಯಿಲ್ಲ. ಹೆಚ್.ಡಿ.ಕುಮಾರಸ್ವಾಮಿಗೆ ಬೆಂಬಲ ನೀಡೋದಾಗಿ ಅವರೇ ಹೇಳಿದ್ದಾರೆ ಎಂದು ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ.
ಯಾರೂ ಗಾಬರಿಪಡಬೇಕಿಲ್ಲ ಎಂದಿರುವ ಅವರು, ಬೆಂಗಳೂರಿಗೆ ಹೋಗಿ ಮಾಹಿತಿ ತಿಳಿದು ಹೇಳುತ್ತೇನೆ. ಎನ್.ಮಹೇಶ್ ನೀಡಿರುವ ರಾಜೀನಾಮೆ ಅದು ಅವರ ಪಕ್ಷದ ತೀರ್ಮಾನ ಇರಬಹುದು. ಅವರು ನೀಡಿರುವ ರಾಜಿನಾಮೆಯನ್ನು ಸಿಎಂ ಅಂಗೀಕರಿಸುತ್ತಾರೋ ಅಥವಾ ಮಾಯಾವತಿ ಜೊತೆ ಮಾತನಾಡುತ್ತಾರೊ ಎನೋ ಗೊತ್ತಿಲ್ಲ ಎಂದರು.
ಮೊದಲಬಾರಿ ಗೆದ್ದು ಸಚಿವರಾಗಿರುವ ಎನ್.ಮಹೇಶ್, ಒಳ್ಳೆಯ ರಾಜಕಾರಣಿಯಾಗಿದ್ದಾರೆ ಎಂದು ಹಾಸನದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ ಹೇಳಿಕೆ ನೀಡಿದ್ದಾರೆ.
ಅವರು ರಾಜೀನಾಮೆ ನೀಡಬಾರದು. ಸರಕಾರದಲ್ಲಿ ಮುಂದುವರೆಯಿರಿ ಎಂದು ನಾವು ಹೇಳುತ್ತೇವೆ. ಅವರು ಏಕೆ ರಾಜೀನಾಮೆ ನೀಡಿದ್ದಾರೊ ಗೊತ್ತಿಲ್ಲ ಎಂದು ಸಚಿವ ರೇವಣ್ಣ ಹೇಳಿದ್ದಾರೆ.