Daily Horoscope

Select Your Language

Notifications

webdunia
webdunia
webdunia
webdunia

ಸ್ಟಿಂಗ್ ಅಂತ ಮಂಗ ಮಾಡುವವರು: ಆರ್.ಅಶೋಕ್ ಟೀಕೆ

R Ashoka
ದೊಡ್ಡಬಳ್ಳಾಪುರ: ಬರದ ಕುರಿತು ವಿಶೇಷ ಅಧಿವೇಶನ ಕರೆದ ಸರ್ಕಾರ ರೈತರಿಗಾಗಿ ಒಳ್ಳೆಯ ಪ್ಯಾಕೇಜ್ ಕೊಡ್ತಾರೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ ಕೊನೆಗೆ ಘೋಷಣೆ ಮಾಡಿದ್ದು ಕೇವಲ ಎರಡೂವರೆ ಸಾವಿರ. ಬರದ ಬಗ್ಗೆ ಈಗ ಚರ್ಚೆಗಿಂತ ಸಿ.ಡಿ ವಿಚಾರವೇ ಮುಖ್ಯವಾಗಿದೆ. ಸ್ಟಿಂಗ್ ಅಂತ ಎಲ್ಲರನ್ನೂ ಮಂಗ ಮಾಡುತ್ತಿದ್ದಾರೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್.ಆಶೋಕ್ ಅವರು ಆರೋಪಿಸಿದರು. 
 
ಇಲ್ಲಿ ಇಂದು ಆಯೋಜಿಸಿದ್ದ ರೈತ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಎರಡೂವರೆ ಸಾವಿರಕ್ಕೆ ಎತ್ತಿಗೆ ಲಾಳ ಕಟ್ಟಿಸಲು ಮಾತ್ರ ಸಾಕಾಗುತ್ತದೆ. ಡಿಕೆಶಿ ಸಿಎಂ ಎಂದು ಯಾರಿಗೂ ಅನಿಸುತ್ತಲೇ ಇಲ್ಲ. ಅವರು ರಾಮನಗರ ಮತ್ತು ಕನಕಪುರಕ್ಕೆ ಮಾತ್ರ ಮುಖ್ಯಮಂತ್ರಿ. ದೊಡ್ಡಬಳ್ಳಾಪುರದಲ್ಲಿ ಕೆಐಎಡಿಬಿ ಮೂಲಕ ಜಮೀನು ಸ್ವಾಧೀನ ಮಾಡಲಾಗುತ್ತಿದೆ. ಹಾಗೆಯೇ ಬಿಡದಿಯಲ್ಲಿ ಜಮೀನು ಸ್ವಾಧೀನ ಮಾಡಲಾಗುತ್ತಿದೆ. ಆದರೆ ಜಮೀನಿಗೆ ನೀಡ್ತಾ ಇರುವ ಪರಿಹಾರದಲ್ಲಿ ಮಾತ್ರ ಅಜಗಜಾಂತರ ವ್ಯತ್ಯಾಸವಿದೆ ಎಂದು ಟೀಕಿದರು. 
 
ಬರ ಬಂದಿರುವುದು ರೈತರಿಗೆ ಮಾತ್ರ. ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಬರ ಬಂದಿಲ್ಲ. ಮುನಿಯಪ್ಪ ಅವರಿಗೆ ಬರ ಬಂದಿಲ್ಲ.ಮನೆಹಾಳ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ 3800 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಾಲ ಮಾಡಿ ಕಾಟ ತಾಳಲಾರದೆ ರೈತರು ಜೀವ ಬಿಡುತ್ತಿದ್ದಾರೆ. ಇದರ ಬಗ್ಗೆ ಚರ್ಚೆಗಿಂತ ಸ್ಟಿಂಗ್ ಬಗ್ಗೆಯೇ ಮಾತನಾಡುತ್ತಾರೆ ಎಂದು ದೂರಿದರು. 
 
ಕಾಂಗ್ರೆಸ್ ಪಕ್ಷವನ್ನು ಅದೇ ಪಕ್ಷದವರು ಹಳ್ಳತೋಡಿ ಮುಗಿಸಲು ಮುಂದಾಗಿದ್ದಾರೆ. ನಾವು ಸ್ಟಿಂಗ್ ಬಗ್ಗೆ ಮಾತನಾಡಲ್ಲ. ರೈತರ ಬಗ್ಗೆ ಮಾತನಾಡುತ್ತೇವೆ. ರೈತರಿಗೆ ನೀಡಬೇಕಾದ ಪರಿಹಾರಕ್ಕೆ ಒತ್ತಾಯಿಸುತ್ತಿದ್ದೇವೆ. ಸರ್ಕಾರ ಘೋಷಿಸಿದ ಎರಡೂವರೆ ಸಾವಿರದಲ್ಲಿ ನಯಾಪೈಸೆ ನೀಡಿಲ್ಲ. ಸರ್ಕಾರ ಇನ್ನೂ ಕೆಲಸ ಮಾಡ್ತಾ ಇದೆ ಎಂದು ಅನಿಸುತ್ತಿಲ್ಲ. ಖಜಾನೆಯಂತೂ ಖಾಲಿಯಾಗಿದೆ. ಒಳ್ಳೆ ಕೆಲಸ ಮಾಡಿದ ಧೀರಜ್ ಮುನಿರಾಜು ಅವರಿಗೆ ಬೆಂಬಲ ನೀಡೋಣ ಎಂದು ಮನವಿ ಮಾಡಿದರು. 
 
ಮರ್ಯಾದೆ ಇಲ್ಲದ ಕಾಂಗ್ರೆಸ್ ಈಗ ಜರಳೆ ಪಕ್ಷದ ಜೊತೆ ಸೇರಿದ್ದಾರೆ. ಏಕೆಂದರೆ ಕಾಂಗ್ರೆಸ್‍ಗೆ ಮೂರುಪೈಸೆ ಬೆಲೆ ಇಲ್ಲವಾಗಿದೆ. ಜನ ಹಾಲು ಕೇಳಿದರೆ ಆಲ್ಕೋಹಾಲ್ ಅನ್ನು ಕಾಂಗ್ರೆಸ್ ಕೊಡ್ತಾ ಇದೆ ಎಂದು ವ್ಯಂಗ್ಯವಾಡಿದರು.
 

Share this Story:

Follow Webdunia kannada

ಮುಂದಿನ ಸುದ್ದಿ

ಕೇವಲ ಆರ್ ಎಸ್ಎಸ್, ಬಿಜೆಪಿಯಲ್ಲ, ಹಿಂದುತ್ವವನ್ನೇ ನಾಶ ಮಾಡಬೇಕು: ಎಸ್ಎಫ್ಐ ನಾಯಕಿಯ ಹೇಳಿಕೆ ವೈರಲ್ Video