ರಾಜ್ಯ ಸರ್ಕಾರದ ಪತನದ ಮುಹೂರ್ತ ಫಿಕ್ಸ್ ಆಗಿದೆ: ಮಾಜಿ ಡಿಸಿಎಂ ಆರ್ ಅಶೋಕ್

Webdunia
ಗುರುವಾರ, 29 ನವೆಂಬರ್ 2018 (11:15 IST)
ಬೆಂಗಳೂರು: ರಾಜ್ಯದ ಮುಖ್ಯಮಂತ್ರಿ ಆದವರಿಗೆ ತಾಳ್ಮೆ ಇರಬೇಕು, ಎಲ್ಲರಿಗೂ ಉತ್ತರಿಸುವ ಸೌಜನ್ಯ ಇರಬೇಕು. ಆದರೆ ಈ ಮುಖ್ಯಮಂತ್ರಿಗೆ ಅದು ಯಾವುದೂ ಇಲ್ಲ. ಹೀಗಾಗಿ ಇವರು ಹೆಚ್ಚು ದಿನ ಅಧಿಕಾರದಲ್ಲಿ ಇರಲ್ಲ ಎಂದು ಮಾಜಿ ಡಿಸಿಎಂ, ಬಿಜೆಪಿ ಶಾಸಕ ಆರ್ ಅಶೋಕ್ ಅಭಿಪ್ರಾಯಪಟ್ಟಿದ್ದಾರೆ.


ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶೋಕ್ ‘ರಾಜಕಾರಣ ನಿಂತ ನೀರಲ್ಲ. ಇಲ್ಲಿ ಏನು ಬೇಕಾದರೂ ಆಗಬಹುದು. ಸಿದ್ದರಾಮಯ್ಯನವರೇ ದೇವೇಗೌಡರ ಜತೆ ಹೋಗುತ್ತಾರೆಂದರೆ ಇಲ್ಲಿ ಏನು ಬೇಕಾದರೂ ಆಗಬಹುದು. ಸಿದ್ದರಾಮಯ್ಯ ಬಿಜೆಪಿ ಸೇರ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಈ ಸರ್ಕಾರವಂತೂ ಹೆಚ್ಚು ದಿನ ಉಳಿಯಲ್ಲ. ಜನತೆ, ಭಗವಂತ ಇದರ ಪತನಕ್ಕೆ ಮುಹೂರ್ತ ಫಿಕ್ಸ್ ಮಾಡಿದ್ದಾರೆ’ ಎಂದು ಅಶೋಕ್ ಹೇಳಿದ್ದಾರೆ.

ಇನ್ನು, ಸಿಎಂ ಕುಮಾರಸ್ವಾಮಿ ಪದೇ ಪದೇ ತಾಳ್ಮೆ ಕಳೆದುಕೊಳ್ಳುತ್ತಿರುವವರ ಬಗ್ಗೆ ಮಾತನಾಡಿದ ಅಶೋಕ್ ‘ನಿಮಗೇ ಗೊತ್ತಿದೆ, ಈ ಮುಖ್ಯಮಂತ್ರಿಗಳು ಪದೇ ಪದೇ ತಾಳ್ಮೆ ಕಳೆದುಕೊಳ್ಳುತ್ತಿದ್ದಾರೆ. ಪ್ರಶ್ನೆ ಕೇಳುವ ಮಾಧ್ಯಮಗಳ ಮೇಲೆ ರೇಗುತ್ತಾರೆ, ವಿಷ್ಣುವರ್ಧನ್ ಸ್ಮಾರಕದ ಬಗ್ಗೆ ಮಾತನಾಡಿದ್ರೆ ತಾಳ್ಮೆ ಕಳೆದುಕೊಳ್ಳುತ್ತಾರೆ. ಯಾರು ಏನೇ ಹೇಳಿದರೂ ರೇಗಾಡುತ್ತಾರೆ. ಈ ರೀತಿ ತಾಳ್ಮೆ ಕಳೆದುಕೊಳ್ಳುವುದು ಮುಖ್ಯಮಂತ್ರಿಗೆ ಶೋಭೆಯಲ್ಲ’ ಎಂದು ಲೇವಡಿ ಮಾಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

NEET-UG 2026 ಪೇಪರ್‌ ಲೀಕ್: ಪ್ರಮುಖ ಆರೋಪಿ ಅರೆಸ್ಟ್‌

ಜನಸಂಖ್ಯೆ ಕುಸಿತ ತಡೆಯಲು ಮೂರನೇ, ನಾಲ್ಕನೇ ಮಗು ಪ್ರೋತ್ಸಾಹ ಧನ ಘೋಷಿಸಿದ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು

ಸಿಎಂ ವಿಜಯ್‌ ನಿರ್ವಹಿಸಲಿರುವ ಖಾತೆಗಳು ಯಾವುದೆಲ್ಲ ಗೊತ್ತಾ

ಅನಧಿಕೃತವಾಗಿ ಬಡ್ಡಿ ವ್ಯವಹಾರ: ಶಿವಂ ಅಸೋಸಿಯೇಟ್ಸ್ ಮಾಲೀಕ ನೀಲಣ್ಣವರ ಅರೆಸ್ಟ್‌

ಒಂದು ದೇಶ ಒಂದು ಚುನಾವಣೆ’ ಜಾರಿ- ಬಿಜೆಪಿ ಮನವಿ

ಮುಂದಿನ ಸುದ್ದಿ
Show comments