Select Your Language

Notifications

webdunia
webdunia
webdunia
webdunia

ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಆರ್‌.ಅಶೋಕ್ ಮೊದಲ ಪ್ರತಿಕ್ರಿಯೆ

ಸೂರಜ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದ ಬಗ್ಗೆ ಆರ್‌.ಅಶೋಕ್ ಮೊದಲ ಪ್ರತಿಕ್ರಿಯೆ

Sampriya

ಬೆಂಗಳೂರು , ಶನಿವಾರ, 22 ಜೂನ್ 2024 (15:40 IST)
ಬೆಂಗಳೂರು: ಸೂರಜ್ ರೇವಣ್ಣ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪದ ಬಗ್ಗೆ ವಿಪಕ್ಷ ನಾಯಕ ಆರ್ ಅಶೋಕ್ ಪ್ರತಿಕ್ರಿಯಿಸಿ, ಪ್ರಜ್ವಲ್ ರೇವಣ್ಣ ಮೇಲೆ ಕೇಳಿ ಬಂದಿರುವ ಆರೋಪದ ಬಗ್ಗೆ ಈಗಾಗಲೇ ತನಿಖೆ ಶುರುವಾಗಿದ್ದು, ನ್ಯಾಯಯುತ ತನಿಖೆ ಆಗಲಿ ಎಂದು ಹೇಳಿದರು.

ಈ ಕುರಿತು ಮಾತನಾಡಿದ ಅವರು, ನಾನು ಸಹ ಮಾಧ್ಯಮದಲ್ಲಿ ಸೂರಜ್ ರೇವಣ್ಣ ಬಗ್ಗೆ ನೋಡಿದ್ದೇನೆ. ಸೂರಜ್ ರೇವಣ್ಣ ಸಹ ಆರೋಪ ಮಾಡಿದ್ದಾರೆ. ನನ್ನನ್ನು ಬ್ಲ್ಯಾಕ್‌ಮೇಲ್ ಮಾಡುತ್ತಿರುವ ಬಗ್ಗೆ. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಗೊಂದಲ ಕಾಣಿಸುತ್ತಿದೆ ಎಂದರು.

ಎರಡೂ ಕಡೆ ದೂರು ದಾಖಲಾಗಿರುವ ಕಾರಣ ಜಟಿಲ ಕೇಸ್ ರೀತಿಯಲ್ಲಿ ಕಾಣಿಸುತ್ತಿದೆ. ಬ್ಲಾಕ್‌ಮೇಲ್ ಮಾಡುತ್ತಿದ್ದಾರೆಂದು  ಮೊದಲು ದೂರು ಕೊಟ್ಟವರು ಸೂರಜ್ ರೇವಣ್ಣ. ಏನೇ ಆದರೂ ತನಿಖೆ ಆಗಿ, ನ್ಯಾಯ ಸಿಗಲಿ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಕುರಿಚಿ ಕಳ್ಳಬಟ್ಟಿ ದುರಂತ: ಮೃತರ ಸಂಖ್ಯೆ 53ಕ್ಕೆ ಏರಿಕೆ, 7ಮಂದಿ ಅರೆಸ್ಟ್