Webdunia - Bharat's app for daily news and videos

Install App

ಖಮರುಲ್ ಇಸ್ಲಾಂ ಆಸೆಯಂತೆ ತಾಯಿ, ತಂದೆಯ ಸಮಾಧಿ ಪಕ್ಕದಲ್ಲೇ ದಫನ್

Webdunia
ಸೋಮವಾರ, 18 ಸೆಪ್ಟಂಬರ್ 2017 (15:34 IST)
ಕಲಬುರ್ಗಿ: ಮಾಜಿ ಸಚಿವ ಖಮರುಲ್ ಇಸ್ಲಾಂ ಅವರ ಕೊನೆಯ ಆಸೆಯಂತೆ ಕಲಬುರಗಿ ಜಿಲ್ಲಾ ನ್ಯಾಯಾಲಯ ಹಿಂಭಾಗದಲ್ಲಿರುವ ಖಲಂದರ್ ಖಾನ್ ಕಬರಿಸ್ಥಾನನಲ್ಲಿ ಅಂತ್ಯಸಂಸ್ಕಾರ ನಡೆಸಲು ಕುಟುಂಬಸ್ಥರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಖಮರುಲ್ ಇಸ್ಲಾಂ ಅವರ ತಂದೆ, ತಾಯಿ, ಅಣ್ಣ ಸೇರಿದಂತೆ ಕುಟುಂಬದ ಮೃತ ಸದಸ್ಯರ ದಫನ್ ಇದೆ ಖಲಂದರ್ ಖಾನ್ ಕಬರಿಸ್ಥಾನದಲ್ಲಿ ನಡೆದಿದೆ. ವರ್ಷದ ಹಿಂದೆ ಇಲ್ಲಿಗೆ ಭೇಟಿ ನೀಡಿದ್ದ ಖಮರುಲ್ ಇಸ್ಲಾಂ, ತಮ್ಮ ಸಾವಿನ ನಂತರ ದಫನ್ ಇಲ್ಲಿಯೇ ಮಾಡುವಂತೆ ಹೇಳಿದ್ದರಂತೆ. ಅವರ ಆಸೆಯಂತೆಯೇ ಇದೇ ಕಬರಿಸ್ಥಾನದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಖಮರುಲ್ ಇಸ್ಲಾಂ ಅವರ ತಾಯಿ ಮತ್ತು ಸಹೋದರನ ಸಮಾಧಿ ಪಕ್ಕದಲ್ಲಿ ಇಸ್ಲಾಂ ಧರ್ಮದ ವಿಧಿವಿಧಾನದಂತೆ ಅಂತ್ಯಸಂಸ್ಕಾರ ನೆರವೆರಿಸಲಾಗುವುದು. ಇದಕ್ಕೂ ಮೊದಲು ಹಾಗರಗಾ ರಿಂಗ್ ರಸ್ತೆಯಲ್ಲಿರುವ ಕೆಸಿಟಿ ಮೈದಾನದಲ್ಲಿ ಅಂತಿಮ ದರ್ಶನ ಮತ್ತು ನಮಾಜ್ ಎ ಜಮಾಜ್ (ನಮಾಜ್)ಗೆ ವ್ಯವಸ್ಥೆ ಕಲ್ಪಿಸುವುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಇನ್ನು ಮಾಜಿ ಸಚಿವ ಡಾ.ಖಮರುಲ್ ಇಸ್ಲಾಂ ಅವರ ನಿಧನದ ಹಿನ್ನೆಲೆಯಲ್ಲಿ ಇಂದು ಮಧ್ಯಾಹ್ನದಿಂದ ಜಿಲ್ಲೆಯ ಎಲ್ಲಾ ಶಾಲಾ ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳಿಗೆ ಅರ್ಧ ದಿನ ರಜೆ ಘೋಷಿಸಲಾಗಿದೆ. ನಾಳೆ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಆರ್.ವೆಂಕಟೇಶ್ ಕುಮಾರ್ ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

1.3 ಮಿಲಿಯನ್‌ ಅನುಯಾಯಿಗಳನ್ನು ಹೊಂದಿದ್ದ ಪಾಕ್‌ ಟಿಕ್‌ಟಾಕ್‌ ಸ್ಟಾರ್‌ ಗುಂಡೇಟಿಗೆ ಬಲಿ, CCTV Video

ಪಡುಬಿದ್ರಿ ಡೇವಿಡ್ ಹತ್ಯೆ ಪ್ರಕರಣ, ಮಹತ್ವದ ಬೆಳವಣಿಗೆ

ಉಡುಪಿ, ಬಾಳೆಹಣ್ಣುಗಳನ್ನು ಕೃತಕವಾಗಿ ಹಣ್ಣಾಗಿಸಲು ರಾಸಾಯನಿಕ ಬಳಕೆ ಪತ್ತೆ

ಪ್ರೀತಿಸಿ ಮದುವೆಯಾಗಿದ್ದಕ್ಕೆ ಗಂಡನ ಮನೆಯಿಂದ ಕಿರುಕುಳ, ಮಗುವನ್ನು ಉಸಿರುಗಟ್ಟಿಸಿ ಕೊಂದು ಸಾವಿಗೆ ಶರಣಾದ ಮಹಿಳೆ

ಕ್ಲಾಸ್‌ವರ್ಕ್ ಮಾಡದಕ್ಕೆ ಕೆನ್ನೆಗೆ ಬಾರಿಸಿದ ಶಿಕ್ಷಕಿ, ಆಘಾತಗೊಂಡ ತರಗತಿಯಲ್ಲೇ ಉಸಿರು ಚೆಲ್ಲಿದ ಎಲ್‌ಕೆಜಿ ಬಾಲಕ, CCTV Video

ಮುಂದಿನ ಸುದ್ದಿ
Show comments