Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ

ಮಾಜಿ ಸಚಿವ ಖಮರುಲ್ ಇಸ್ಲಾಂ ನಿಧನ
ಬೆಂಗಳೂರು , ಸೋಮವಾರ, 18 ಸೆಪ್ಟಂಬರ್ 2017 (12:55 IST)
ಬೆಂಗಳೂರು: ಮಾಜಿ ಸಚಿವ, ಕಲಬುರ್ಗಿಉತ್ತರ ಮತಕ್ಷೇತ್ರದ ಶಾಸಕ ಖಮರುಲ್ ಇಸ್ಲಾಂ(69) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

1948 ಜನವರಿ 27ರಂದು ಜನಿಸಿದ್ದ ಖಮರುಲ್ ಇಸ್ಲಾಂ, 1978ರಲ್ಲಿ ರಾಜಕೀಯ ಪ್ರವೇಶಿಸಿದ್ದರು. 6 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. 1996-98ರ ಅವಧಿಯಲ್ಲಿ ಒಮ್ಮೆ ಸಂಸದರಾಗಿಯೂ ಆಯ್ಕೆಯಾಗಿದ್ದರು. ಮೊದಲಿಗೆ ಮುಸ್ಲೀಂ ಲೀಗ್ ನಿಂದ ಶಾಸಕರಾಗಿದ್ದ ಅವರು, ನಂತರ ಜೆಡಿಎಸ್ ಸೇರಿ ಮೊದಲ ಬಾರಿ ವಸತಿ ಸಚಿವರಾಗಿದ್ದರು.

ನಂತರ ಕಾಂಗ್ರೆಸ್ ನಲ್ಲಿ ಮುಂದುವರೆದು, ಅಖಿಲ ಭಾರತ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಕಾರ್ಯದರ್ಶಿ ಮತ್ತು ಕೇರಳ ರಾಜ್ಯದ ಉಸ್ತುವಾರಿ ಸಹ ಆಗಿದ್ದರು. ರಾಜ್ಯ ವಸತಿ, ಕಾರ್ಮಿಕ, ವಕ್ಫ್, ಪೌರಾಡಳಿತ ಸಚಿವರು ಆಗಿದ್ದರು. ಬಳಿಕ ಸಚಿವ ಸ್ಥಾನ ಕಳೆದುಕೊಂಡಿದ್ದರು. ಮಕ್ಕಳಿಲ್ಲದ ಕಾರಣ ಒಂದು ಗಂಡು ಮಗುವನ್ನು ದತ್ತು ಪಡೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬಿಎಸ್‌ವೈಗೆ ಉ. ಕರ್ನಾಟಕದಿಂದ ಸ್ಪರ್ಧಿಸುವಂತೆ ಹೈಕಮಾಂಡ್ ಸೂಚನೆ