Webdunia - Bharat's app for daily news and videos

Install App

ಕುಡಿದ ಮತ್ತಲ್ಲಿ ಸ್ನೇಹಿತರ ನಡುವೆ ಕಿರಿಕ್..!

Webdunia
ಶುಕ್ರವಾರ, 24 ಮಾರ್ಚ್ 2023 (20:00 IST)
ಅವ್ರಿಬ್ರು ಸ್ನೇಹಿತರು.ಗಾರೆ ಕೆಲಸ ಮಾಡಿಕೊಂಡಿದ್ದವರು.ಯುಗಾದಿ ಹಬ್ಬಕ್ಕೆ ಅಂತಾ ಎರಡು ದಿನ ರಜಾ ಹಾಕಿದ್ರು.ಹೀಗಿದ್ದವರು ಇಂದು ಮಟ ಮಟ ಮಧ್ಯಾಹ್ನ ಎಣ್ಣೆ ಬಿಟ್ಕೊಳಕ್ಕೆ ಬಾರಿಗೆ ಬಂದಿದ್ರು.ಹೀಗೆ ಬಂದವರ ಮಧ್ಯೆ ಕಿರಿಕ್ ಆಗಿತ್ತು.ಅದೇ ಕಿರಿಕ್ ಓರ್ವನ ಕೊಲೆ ಹಂತಕ್ಕೆ ಹೋಗಿದೆ.ಪೊಲೀಸರ ತಂಡವೇ ಬಂದಿದೆ.ಖುದ್ದು ಡಿಸಿಪಿಯೇ ಆಗಮಿಸಿದ್ದಾರೆ..ಇಂಚಿಂಚು ಪರಿಶೀಲನೆ ನಡೆಸ್ತಿದ್ದಾರೆ..ಜನ ಭಯದಿಂದಲೇ ನಿಂತು ನೋಡ್ತಿದ್ದಾರೆ..ಇಲ್ಲೊಬ್ಬನ ನೆತ್ತರು ಹರಿದಿದೆ..ಜೊತೆಗೆ ಬಂದ ಸ್ನೇಹಿತನೇ ಕೊಂದು ಪರಾರಿಯಾಗಿದ್ದಾನೆ.

ವ್ಯಕ್ತಿಯ ಹೆಸರು ನರೇಶ್..ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆಗೆ ಗೋವಿಂದರಾಜನಗರದಲ್ಲಿ ವಾಸವಿದ್ದ.ಗಾರೆ ಕೆಲಸ ಮಾಡಿಕೊಂಡು ಬದುಕು ಕಟ್ಟಿಕೊಂಡಿದ್ದ.ಯುಗಾದಿ ಹಬ್ಬ ಇದ್ದಿದ್ದರಿಂದ ನಿನ್ನೆ ಮತ್ತು ಇವತ್ತು ಕೆಲಸಕ್ಕೆ ಹೋಗಿರ್ಲಿಲ್ಲ..ಹೀಗಿರಬೇಕಾದರೆ ಇಂದು ಬೆಳಗ್ಗೆ 11 ಗಂಟೆ ಕಬ್ಬಿನ ಹಾಲು ಕುಡಿದು ಬರ್ತಿನಿ ಅಂತಾ ಮನೆಯಿಂದ ಬಂದವನು ಕೊಲೆಯಾಗಿಹೋಗಿದ್ದಾನೆ.
 
ಮನೆಯಲ್ಲಿ ಕಬ್ಬಿನ ಹಾಲು ಕುಡಿಯಲು ಅಂತಾ ಹೀಗೆ ಹೊರಟವನು ಸ್ನೇಹಿತ ಮಾರಿಮುತ್ತು ಹಾಗು ಮತ್ತಿಬ್ಬರ ಜೊತೆಗೆ ಬಾರ್ ಗೆ ಬಂದಿದ್ದಾನೆ.ಬಾರ್ ನಲ್ಲಿ ಕುಡಿದು ಸ್ನೇಹಿತರ ಮಧ್ಯೆ ಕಿರಿಕ್ ಆಗಿದೆ..ಅದೇ ಕಿರಿಕ್ ರಸ್ತೆಯುದ್ದಕ್ಕೂ ಮುಂದವರಿದುಕೊಂಡು ಬಂದಿದೆ.ಅದೇ ಗಲಾಟೆ ವಿಕೋಪಕ್ಕೆ ತಿರುಗಿ ಆರೋಪಿ ಮಾರಿಮುತ್ತು..ನರೇಶ್ ತಲೆಗೆ ಫುಟ್ಬಾತ್ ಗೆ ಅಳವಡಿಸಿರು ಸಿಮೆಂಟ್ ಕಲ್ಲಿನಿಂದ ತಲೆಗೆ ಹೊಡೆದಿದ್ದಾನೆ.ಕುಡಿದ ಮತ್ತಲ್ಲಿದ್ದ ನರೇಶ್ ಒಂದೇ ಏಟಿಗೆ ನೆಲಕ್ಕುರುಳಿಬಿದ್ದಿದ್ದ.ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಮೃತ ನರೇಶ್ ಪತ್ನಿ ಮಹಾದೇವಿ ನೀಡಿದ ದೂರಿನ ಮೇರೆಗೆ ಗೋವಿಂದರಾಜನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು,ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ..ಆರೋಪಿಗಳು ಸಿಕ್ಕಬಳಿಕವಷ್ಟೇ ಘಟನೆಗೆ ನಿಖರ ಕಾರಣ ಏನು ಅನ್ನೋದು ಗೊತ್ತಾಗಬೇಕಿದೆ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಆರ್ ಎಸ್ಎಸ್ ಹೊಗಳಿದ್ದಕ್ಕೆ ಸಿದ್ದರಾಮಯ್ಯ ಸಿಟ್ಟು

ನನ್ನನ್ನು ಕೆಳಗಿಳಿಸಲು ದೆಹಲಿಯಲ್ಲಿ ವ್ಯವಸ್ಥಿತವಾದ ಸಂಚು ನಡೆದಿದೆ: ಕೆಎನ್‌ ರಾಜಣ್ಣ ‌ಕಿಡಿ

ಸ್ವಾತಂತ್ರ್ಯ ದಿನಾಚರಣೆಯಂದೆ ಮಹಿಳೆಯರಿಗೆ ಭರ್ಜರಿ ಗಿಫ್ಟ್‌ ನೀಡಿದ ಆಂಧ್ರ ಸಿಎಂ

ತಿರುನೆಲ್ವೇಲಿಯಿಂದ ಶಿವಮೊಗ್ಗ ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್‌ನ್ಯೂಸ್‌

ಬೆಂಗಳೂರು ಸ್ಪೋಟ: 5 ಲಕ್ಷ ರೂ ಪರಿಹಾರ ಘೋಷಿಸಿದ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments