Select Your Language

Notifications

webdunia
webdunia
webdunia
webdunia

ವಿಧಾನಸಭೆಗೆ ಅಪರಿಚಿತ ವ್ಯಕ್ತಿ ಬೆನ್ನಲ್ಲೇ ಖಾದರ್ ಅಲರ್ಟ್

ವಿಧಾನಸಭೆಗೆ ಅಪರಿಚಿತ ವ್ಯಕ್ತಿ ಬೆನ್ನಲ್ಲೇ ಖಾದರ್ ಅಲರ್ಟ್
ಬೆಂಗಳೂರು , ಮಂಗಳವಾರ, 11 ಜುಲೈ 2023 (07:06 IST)
ಬೆಂಗಳೂರು : ವಿಧಾನಸಭೆಯ ಸಭಾಂಗಣಕ್ಕೆ ಅಪರಿಚಿತ ವ್ಯಕ್ತಿ ಪ್ರವೇಶ ಬೆನ್ನಲ್ಲೇ ಸ್ಪೀಕರ್ ಖಾದರ್ ಅಲರ್ಟ್ ಆಗಿದ್ದಾರೆ.

ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಭದ್ರತೆ ಬಿಗಿಗೊಳಿಸುವಂತೆ ಸೂಚನೆ ಕೊಟ್ಟು ಖುದ್ದಾಗಿ ಪರಿಶೀಲನೆ ನಡೆಸಿದ್ದಾರೆ. ಈ ಬೆನ್ನಲ್ಲೇ ಸಚಿವಾಲಯದ ಸಿಬ್ಬಂದಿಯ ವ್ಯಾನಿಟಿ ಬ್ಯಾಗ್ನಲ್ಲಿ ಚಾಕುವೊಂದು ಪತ್ತೆಯಾಗಿದೆ. ಚಾಕು ವಶಕ್ಕೆ ಪಡೆದು ಮಹಿಳಾ ಸಿಬ್ಬಂದಿಗೆ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಪೊಲೀಸರು ಕಳುಹಿಸಿ ಕೊಟ್ಟಿದ್ದಾರೆ.

ಕಲಾಪದಲ್ಲಿ ಎಲ್ಲರೂ ಐಡಿ ಕಾರ್ಡ್ ತೋರಿಸಿ ಸದನ ಪ್ರವೇಶಿಸಬೇಕೆಂದು ಸ್ಪೀಕರ್ ಸೂಚನೆ ಕೊಟ್ಟಿದ್ದಾರೆ. ಈ ವೇಳೆ ಸದಸ್ಯರ ಪ್ರವೇಶ ವೇಳೆ ಫೇಸ್ ಐಡೆಂಟಿಫಿಕೇಷನ್ ವ್ಯವಸ್ಥೆ ಜಾರಿಗೆ ತನ್ನಿ ಅಂತ ಬಸವರಾಜ ರಾಯರೆಡ್ಡಿ ಸಲಹೆ ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದು ಎಲ್ಲೆಲ್ಲಿ ಮಳೆ, ಏನೇನು ಅನಾಹುತಗಳಾಗಿವೆ?