Select Your Language

Notifications

webdunia
webdunia
webdunia
webdunia

ಪುತ್ತೂರಿನಲ್ಲಿ ಬಿಜೆಪಿ ಮುಖಂಡನ ಪುತ್ರ ಕೃಷ್ಣನಿಂದ ಮಗು ಪಡೆದ ಯುವತಿ ಕೇಸ್ ಗೆ ಬಿಗ್ ಟ್ವಿಸ್ಟ್

Puttur Krishna J Rao case
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಿಜೆಪಿ ಮುಖಂಡನ ಪುತ್ರ ಕೃಷ್ಣನಿಂದ ಗರ್ಭಿಣಿಯಾಗಿ ಮಗು ಜನಿಸಿದ್ದ ಯುವತಿ ಕೇಸ್ ಗೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ.

ಮದುವೆಯಾಗುವುದಾಗಿ ನಂಬಿಸಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡಿದ್ದ ಕೃಷ್ಣ ಜೆ ರಾವ್ ಕೊನೆಗೆ ಆಕೆ ಗರ್ಭಿಣಿ ಎನ್ನುವುದು ತಿಳಿಯುತ್ತಿದ್ದಂತೇ ಕೈ ಕೊಟ್ಟಿದ್ದ. ಇದೀಗ ಯುವತಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ. ಆದರೆ ಮಗುವನ್ನು ತನ್ನದು ಎಂದು ಒಪ್ಪಿಕೊಳ್ಳಲು ಕೃಷ್ಣ ಸಿದ್ಧನಿರಲಿಲ್ಲ. ಮದುವೆಯಾಗಲೂ ನಿರಾಕರಿಸಿದ್ದ.

ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಈ ಸಂಬಂಧ ಬಂಧಿತನಾಗಿದ್ದ ಆತ ಇತ್ತೀಚೆಗಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಇದರ ಬೆನ್ನಲ್ಲೇ ನ್ಯಾಯಾಲಯದ ಆದೇಶದ ಹಿನ್ನಲೆಯಲ್ಲಿ ಮಗುವಿನ ತಂದೆ ಯಾರು ಎಂದು ತಿಳಿಯಲು ಡಿಎನ್ ಎ ಪರೀಕ್ಷೆ ನಡೆಸಲಾಗಿತ್ತು.

ಇದೀಗ ಡಿಎನ್ ಎ ಪರೀಕ್ಷೆಯಲ್ಲಿ ಮಗುವಿನ ತಂದೆ ಕೃಷ್ಣನೇ ಎಂಬುದು ದೃಢಪಟ್ಟಿದೆ. ಇದು ಪ್ರಕರಣಕ್ಕೆ ದೊಡ್ಡ ಟ್ವಿಸ್ಟ್ ನೀಡಿದೆ. ಇದುವರೆಗೆ ಮಗು ನನ್ನದಲ್ಲ, ಆಕೆಗೆ ಬೇರೆ ಸಂಬಂಧವಿತ್ತು ಎಂದೆಲ್ಲಾ ಕತೆ ಕಟ್ಟಿದ್ದ ಕೃಷ್ಣ ಕುಟುಂಬಕ್ಕೆ ಈಗ ಮುಖಭಂಗವಾದಂತಾಗಿದೆ.

ಇದೀಗ ಕೃಷ್ಣ ನಮ್ಮ ಹುಡುಗಿಯನ್ನು ಮದುವೆಯಾಗಬೇಕು, ಮಗುವಿಗೆ ತಂದೆಯಾಗಬೇಕು ಎಂದು ಯುವತಿಯ ಕುಟುಂಬಸ್ಥರು ಒತ್ತಾಯಿಸಿದ್ದಾರೆ. ಹಿಂದೂ ಸಂಘಟನೆಗಳು ಮುಂದೆ ಬಂದು ಇಬ್ಬರಿಗೆ ಮದುವೆ ಮಾಡಿಸಬೇಕು. ಯುವತಿ ಮತ್ತು ಮಗುವಿಗೆ ನ್ಯಾಯ ಕೊಡಿಸಬೇಕು ಎಂದು ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆಪಿ ನಂಜುಂಡಿ ಆಗ್ರಹಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಾನಸಿಕ ಒತ್ತಡ ಕಡಿಮೆ ಮಾಡುವುದು ಹೇಗೆ, ಈ ವಿಧಾನ ಅನುಸರಿಸಿ