ಚಿಕು ಬುಕು ರೈಲು ಅಂತಾ ಪುಟಾಣಿ ಎಕ್ಸ್ ಪ್ರೆಸ್ ರೈಲಿನಲ್ಲಿ ಮಕ್ಕಳ ಜೊತೆ ರೌಂಡ್ಸ್ ಹಾಕಿದ ಪೋಷಕರು. ಮಕ್ಕಳೊಂದಿಗೆ ಪೋಷಕರ ಆಟದ ಜೊತೆ ಅವರ ತುಂಟಾಟ ನೋಡೋಕೆ ಚೆಂದವೊ ಚೆಂದ. ಯೆಸ್ ವಾರ ಪೂರ್ತಿ ಮನೆ ಆಫೀಸ್ ಅನ್ನೋ ಪೋಷಕರು ಮಕ್ಕಳೊಂದಿಗೆ ಆಟ ಆಡಿ ಕಾಲ ಕಳೆದ್ರೂ. ಇನ್ನು ಸ್ಕೂಲ್ ಹೋಮ್ ವರ್ಕ್ ಅಂತಾ ಬೋರ್ ಆಗಿದ್ದ ಮಕ್ಕಳು, ರೈಲಿನಲ್ಲಿ ರೌಂಡ್ಸ್ ಹಾಕಿದ್ರೂ.ಸಧಾ ತಮ್ಮ ತಮ್ಮ ಕೆಲಸಗಳಲ್ಲೇ ಬ್ಯುಸಿ ಆಗಿ ಮಕ್ಕಳಿಗೂ ಸಮಯ ಕೊಡದ ರಾಜಧಾನಿ ಜನ ಮೊಬೈಲ್ ಮಾಲ್ ಅಂತಷ್ಟೇ ಇದ್ರು, ಆದ್ರೆ ಈಗ ಬೆಂಗಳೂರಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ ಕಬ್ಬನ್ ಪಾರ್ಕ್ ನ ಬಾಲಭವನ ಇದೀಗ ಮತ್ತಷ್ಟು ಮೆರಗು ಪಡೆದುಕೊಂಡಿದ್ದು ವೀಕೆಂಡ್ ನಲ್ಲಿ ಇಲ್ಲಿಗೆ ಭೇಟಿ ನೀಡೋ ಜನರ ಸಂಖ್ಯೆ ಕೂಡ ಹೆಚ್ಚಳವಾಗಿದೆ.
ಕಬ್ಬನ್ ಪಾರ್ಕ್ ಬಾಲಭವನದಲ್ಲಿ ವೀಕೆಂಡ್ ಹಿನ್ನೆಲೆ ಜನಸಾಗರ ಹರಿದು ಬಂದಿತ್ತು. ಮಕ್ಕಳ ಜೊತೆ ಪೋಷಕರು ಬಾಲ್ಯ ಮೆಲುಕು ಹಾಕಿದರು. ಇನ್ನು ಮೊಹರಂ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಕೂಡ ಆಗಮಿಸಿದರು. ಚಿಣ್ಣರು, ಜನರಿಂದ ಬಾಲಭವನ ತುಂಬಿ ಹೋಗಿತ್ತು. ಕೋವಿಡ್ ಬಳಿಕ ಕೆಟ್ಟು ನಿಂತಿದ್ದ ಪುಟಾಣಿ ರೈಲಿಗೆ ಮರುಜೀವ ನೀಡಲಾಗಿದ್ದು, ಬಾಲಭವನಕ್ಕೂ ಹೊಸ ಟಚ್ ನೀಡಿರೋದರಿಂದ ಪ್ರವಾಸಿಗರು ಹೆಚ್ಚಿದ್ದಾರೆ. ರಜೆ ಅಂತಾ ಮೊಬೈಲ್, ಟಿವಿ ಎಂದು ಮಕ್ಕಳು ಕಾಲ ಹರಣ ಮಾಡುವ ಬದಲು ಪ್ರಕೃತಿಯೊಂದಿಗೆ ಆಟ ಆಡಿ, ಫ್ಯಾಮಿಲಿ ಜೊತೆ ಎಂಜಾಯ್ ಮಾಡಿದ್ರು.