ಉಡುಪಿಯ ವೈದ್ಯಕೀಯ ಕಾಲೇಜಿನಲ್ಲಿ ವಿಧ್ಯಾರ್ಥಿನಿ ಶೌಚಾಲಯ ಬಳಸುವ ವೇಳೆ ಮೊಬೈಲ್ ಇಟ್ಟು ರೆಕಾರ್ಡ್ ಮಾಡಿದ ಘಟನೆ ನಡೆದಿದ್ದು.ಆರೋಪದಲ್ಲಿ ಮೂರು ಮುಸ್ಲಿಂ ವಿಧ್ಯಾರ್ಥಿನಿಯರ ಮೇಲೆ ತಡವಾಗಿ ಎಫ್ ಐ ಆರ್ ದಾಖಲಾಗಿದೆ.ಈದನ್ನೆ ಅಸ್ತ್ರವನ್ನಾಗಿಟ್ಟು ಕೊಂಡು ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ಮಾಡುತ್ತಿದೆ.ಸರ್ಕಾರ ಈ ಪ್ರಕರಣವನ್ನ ಮುಚ್ಚಿಹಾಕುವಂತ ಕೆಲಸ ಮಾಡುತ್ತಿದೆ.ಮೂರು ಮುಸ್ಲಿಂ ವಿಧ್ಯಾರ್ಥಿನಿಯರನ್ನ ವಿಚಾರಣೆ ಕೂಡಾ ನಡೆಸಿಲ್ಲ. ಒಂದು ಸಮುದಾಯವನ್ನ ಓಲೈಕ ಮಾಡುವ ಪ್ರಯತ್ನ ನಡೆಸುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸುತ್ತಿದೆ.
ಸಣ್ಣ ಪ್ರಮಾಣದಲ್ಲಿದ್ದ ಈ ಪ್ರಕರಣ ರಾಷ್ಟ್ರೀಯ ಮಟ್ಟದಲ್ಲೀ ಚರ್ಚೆ ಆಗ ತೊಡಿಗಿತು.ಈ ಹಿನ್ನಲೆ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಖುಷ್ಬೂ, ಘಟನೆ ನಡೆದ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ರು. ಇನ್ನೂ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪ್ರಭಾವ ಕಡಿಮೆ ಇದ್ದು ಈ ಘಟನೆಯಿಂದ ಮತ್ತಷ್ಟು ಹೀನಾಯ ಸ್ಥಿತಿಗೆ ಹೋಗುವ ಆತಂಕ ಅಲ್ಲಿಯ ಕಾಂಗ್ರೆಸ್ ಕಾರ್ಯಕರ್ತರು ವ್ಯಕ್ತಪಡಿಸಿದ್ದಾರೆ.ಈ ಹಿನ್ನಲೆ ಈ ಪ್ರಕರಣ ವಿವರವನ್ನ ಸಿಎಂ ಸಿದ್ದರಾಮಯ್ಯ ಪಡೆದು ಕೊಳ್ಳಲು ಮುಂದಾಗಿದ್ದಾರೆ..