Select Your Language

Notifications

webdunia
webdunia
webdunia
webdunia

ಅಪ್ಪು ಕ್ರೀಡಾ ಪ್ರೀತಿ

ಅಪ್ಪು ಕ್ರೀಡಾ ಪ್ರೀತಿ
ಬೆಂಗಳೂರು , ಬುಧವಾರ, 16 ಮಾರ್ಚ್ 2022 (18:43 IST)
ಚಿನ್ನಸ್ವಾಮಿ ಕ್ರೀಡಾಂಗಣ, ಶ್ರೀಕಂಠೀರವ ಕ್ರೀಡಾಂಗಣ, ಫುಟ್ಬಾಲ್‌ ಅಂಗಣ ಇಲ್ಲಿ ನಡೆದ ಕ್ರೀಡಾಕೂಟಗಳನ್ನು, ಕ್ರಿಕೆಟ್‌ ಪಂದ್ಯಗಳನ್ನು ಕಂಡವರಿಗೆ, ವರದಿ ಮಾಡಿದವರಿಗೆ ಪವರ್‌ ಸ್ಟಾರ್‌ ಪುನೀತ್‌ ರಾಜ್‌ ಕುಮಾರ್‌ ಅವರ ಕ್ರೀಡಾಪ್ರೇಮ, ಕ್ರೀಡಾಪಟುಗಳಿಗೆ ಅವರು ನೀಡುತ್ತಿದ್ದ ಸ್ಫೂರ್ತಿ ಇವುಗಳ ಪರಿಚಯ ಇದ್ದೇ ಇರುತ್ತದೆ.
ಮಾರ್ಚ್‌ 17 ಪುನೀತ್‌ ರಾಜ್‌ ಕುಮಾರ್‌ ಅವರ ಜನುಮದಿನ, ಅವರು ನಮ್ಮನ್ನಗಲಿ ಮಾಸಗಳು ಕಳೆದರೂ, ಅವರ ನೆನಪು ಮಾಸದೇ ಉಳಿದಿದೆ. ಇದಕ್ಕೆ ಮುಖ್ಯ ಕಾರಣ ಅವರು ಹೆಜ್ಜೆ ಇಟ್ಟಲ್ಲೆಲ್ಲ ಅರಳಿದ ಸ್ಫೂರ್ತಿ. ಕ್ರೀಡೆಗೂ ಪುನೀತ್‌ಗೂ ಅಪಾರ ನಂಟಿದೆ. ಕರ್ನಾಟಕದಲ್ಲಿ ಕೆಲವು ಕ್ರೀಡಾಕೂಟಗಳು ಇಂದಿಗೂ ಯಶಸ್ಸನ್ನು ಕಾಣಲು ಪುನೀತ್‌ ರಾಜ್‌ಕುಮಾರ್‌ ಅವರ ಹೆಸರೇ ಕಾರಣ.
 
ಪುನೀತ್‌ ಕ್ರೀಡೆಯ ಅಂಬಾಸಿಡರ್‌. ಯಾವುದೇ ಕ್ರೀಡಾಕೂಟವಿರಲಿ ಪುನೀತ್‌ ಅವರು ಅದರ ರಾಯಭಾರಿಯಾಗಿದ್ದರೆಂದರೆ ಆ ಕ್ರೀಡಾಕೂಟ ಯಶಸ್ವಿಯಾಗುತ್ತದೆ. ಮೊನ್ನೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ಶ್ರೀಲಂಕಾ ನಡುವಿನ ಟೆಸ್ಟ್‌ ಪಂದ್ಯದ ವೇಳೆ ನೆರೆದ ಪ್ರೇಕ್ಷಕರೆಲ್ಲರೂ ʼಗೊಂಬೆ ಹೇಳುತೈತೆ..ʼ ಹಾಡಿಗೆ ಎದ್ದು ನಿಂತು ಧ್ವನಿಗೂಡಿಸಿದ್ದನ್ನು ಕಂಡಾಗ ಪುನೀತ್‌ ಕ್ರೀಡಾಂಗಣದ ವಿಐಪಿ ಗ್ಯಾಲರಿಯಲ್ಲಿ ಕುಳಿತಿರುವಂತೆ ಕಂಡು ಬಂತು. ಇಲ್ಲವೆಂದರೂ ಕ್ರೀಡಾಭಿಮಾನಿಗಳ ಹೃಯಾಂಗಣದಲ್ಲಿ ಅವರು ಅಮರರಾಗಿಯೇ ಉಳಿದಿದ್ದಾರೆ.
 
ಅಂತಾರಾಷ್ಟ್ರೀಯ ಮ್ಯಾರಥಾನ್‌ಗಳಲ್ಲಿ ಬೆಂಗಳೂರಿನಲ್ಲಿ ನಡೆಯುವ ವಿಶ್ವ10K ಮ್ಯಾರಥಾನ್‌ ಅತ್ಯಂತ ಪ್ರಸಿದ್ಧವಾದುದು. ಈ ಮ್ಯಾರಥಾನ್‌ಗೆ ಪುನೀತ್‌ ರಾಜ್‌ಕುಮಾರ್‌ ಬ್ರಾಂಡ್‌ಅಂಬಾಸಿಡರ್‌ ಆದಾಗಿನಿಂದು ಇದು ಜಾಗತಿಕ ಮಟ್ಟದಲ್ಲಿ ಗೋಲ್ಡ್‌ ಮ್ಯಾರಥಾನ್‌ ಆಗಿ ರೂಪುಗೊಂಡಿದೆ. ಅಂತಾರಾಷ್ಟ್ರೀಯ ಓಟಗಾರರ ಜೊತೆಯಲ್ಲಿ ಭಾರತದ ವಿವಿಧ ಸ್ಥರದ ಕ್ರೀಡಾಪಟುಗಳು, ಸಾಮಾನ್ಯ ಜನರು, ವಿಶೇಷ ಚೇತನರು ಇದರಲ್ಲಿ ಪಾಲ್ಗೊಂಡು ಕೊಟ್ಯಂತರ ರೂ. ಹರಿದು ಬಂತು. ದುರ್ಬಲರಿಗೆ ನೆರವಾಗುವ ಕೆಲಸವೂ ನಡೆಯಿತು. ಪುನೀತ್‌ ಬ್ರಾಂಡ್‌ ಅಂಬಾಸಿಡರ್‌ ಎಂದು ಕೇವಲ ಸ್ಟೇಜ್‌ನಲ್ಲಿ ನಿಂತು ಅಭಿಮಾನಿಗಳಿಗೆ ಕೈ ಬೀಸಿಲ್ಲ, 

Share this Story:

Follow Webdunia kannada

ಮುಂದಿನ ಸುದ್ದಿ

ಚರ- ಸ್ಥಿರಾಸ್ತಿ ಎ. ಸಿ. ಬಿ. ದಾಳಿ