Select Your Language

Notifications

webdunia
webdunia
webdunia
Saturday, 5 April 2025
webdunia

ಕಸಾಯಿಖಾನೆಗೆ ಸಾಗಿಸುತ್ತಿದ್ದ 30ಕ್ಕೂ ಅಧಿಕ ಗೋವುಗಳನ್ನು ರಕ್ಷಿಸಿದ ಪುನೀತ್ ಕೆರೆಹಳ್ಳಿ

Hindu Leader Puneeth Kerehalli

Sampriya

ಮಂಡ್ಯ , ಬುಧವಾರ, 4 ಸೆಪ್ಟಂಬರ್ 2024 (16:15 IST)
Photo Courtesy X
ಮಂಡ್ಯ: ಜಿಲ್ಲೆಯ ಮದ್ದೂರಿನ ಬಳಿ ಇಂದು ಬೆಳ್ಳಂಬೆಳಗ್ಗೆ ಬೆಂಗಳೂರಿನ ಕಸಾಯಿಖಾನೆಗೆ ಸಾಗಿಸುತ್ತಿದ್ದ 30ಕ್ಕೂ ಅಧಿಕ ಗೋವುಗಳನ್ನು ಹಿಂದೂ ಮುಖಂಡ ಪುನೀತ್ ತಂಡ ಕೆರೆಹಳ್ಳಿ ರಕ್ಷಣೆ ಮಾಡಿದೆ.

ಪುನೀತ್ ಕೆರೆಹಳ್ಳಿ ಈ ಸಂಬಂಧ ಮದ್ದೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಅದರಂತರ ತಬ್ರೇಜ್ ಮತ್ತು ಮನ್ಸೂರು ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

webdunia
Photo Courtesy X
ಈ ಬಗ್ಗೆ ಪುನೀತ್ ಕೆರೆಹಳ್ಳಿ ಅವರು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಗೋ ಹಂತಕರ ಪಾಲಿಗೆ ಸಿಂಗ ಸ್ವಪ್ನವಾದ ರಾಷ್ಟ್ರ ರಕ್ಷಣಾ ಪಡೆ. ಇಂದೂ ಬೆಳ್ಳಂಬೆಳಗ್ಗೆ 4ಗಂಟೆ ಸುಮಾರಿಗೆ ಮಂಡ್ಯ ಜಿಲ್ಲೆ ಮದ್ದೂರಿನ ಬಳಿ ಮಿಂಚಿನ ಕಾರ್ಯಚರಣೆ ನಡೆಸಿ, ಕಸಾಯಿಖಾನೆಗೆ ಸಾಗಿಸುತ್ತಿದ್ದ 30ಕ್ಕೂ ಅಧಿಕ ಗೋವುಗಳನ್ನು ರಕ್ಷಣೆ ಮಾಡಲಾಗಿದೆ.

ಪುನೀತ್ ಕೆರೆಹಳ್ಳಿ ಅವರು ಈಚೆಗೆ ಬೆಂಗಳೂರಿಗೆ ನಾಯಿ ಮಾಂಸವನ್ನು ಸಾಗಾಟ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿ, ಪ್ರತಿಭಟನೆ ನಡೆಸಿದ್ದರು.

Share this Story:

Follow Webdunia kannada

ಮುಂದಿನ ಸುದ್ದಿ

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌: 9 ನಕ್ಸಲರ್ ಹತ್ಯೆ, ಮುಂದುವರೆದ ಕಾರ್ಯಚರಣೆ