Select Your Language

Notifications

webdunia
webdunia
webdunia
webdunia

ಖೆಡ್ಡಾಕ್ಕೆ ಬಿದ್ದ ಪುಂಡಾನೆ!

ಖೆಡ್ಡಾಕ್ಕೆ ಬಿದ್ದ ಪುಂಡಾನೆ!
ವಿರಾಜಪೇಟೆ , ಗುರುವಾರ, 29 ಜೂನ್ 2023 (18:21 IST)
ಇಬ್ಬರು ಸಾರ್ವಜನಿಕರನ್ನ ಬಲಿ ಪಡೆದಿದ್ದ ಪುಂಡಾನೆಯನ್ನ ಅರಣ್ಯ ಇಲಾಖೆ‌ ಸೆರೆಹಿಡಿದಿದೆ. ಅರಣ್ಯ ಇಲಾಖೆಯ ಆದೇಶದ ಮೇರೆಗೆ ದಸರಾ ಕ್ಯಾಪ್ಟನ್ ಅಭಿಮನ್ಯು ತಂಡದಿಂದ ಆನೆಯನ್ನ ಸೆರೆಹಿಡಿಯಲಾಗಿದೆ.
ವಿರಾಜಪೇಟೆ ತಾಲೂಕಿನ ಗುಹ್ಯ ಸಮೀಪದ ಶಿವಾಜಿ ಎಂಬುವವರ ತೋಟದಲ್ಲಿ ಸುಮಾರು 35 ವರ್ಷ ಪ್ರಾಯದ ಗಂಡಾನೆಯನ್ನ ಸೆರೆ‌ ಹಿಡಿಯಲಾಗಿದೆ. ನಾಗರಹೊಳೆ ಪಶುವೈದ್ಯ ರಮೇಶ್ ನೇತೃತ್ವದಲ್ಲಿ ಆನೆಗೆ ಅರವಳಿಕೆ ನೀಡಲಾಗಿತ್ತು. ಸೆರೆಯಾದ ಆನೆಗೆ ರೆಡಿಯೋಕಾಲರ್ ಅಳವಡಿಸಿ ಡಿ‌.ಬಿ.ಕುಪ್ಪೆ ಅರಣ್ಯ ವಲಯಕ್ಕೆ ಸ್ಥಳಾಂತರಿಸಲಾಗಿದೆ. ವಿರಾಜಪೇಟೆ ಉಪ ಅರಣ್ಯ ಸಂರಕ್ಷಣಾ ಅಧಿಕಾರಿ ಬಿ.ಎಂ‌.ಚೆನ್ನಬಸಪ್ಪ ನೇತೃತ್ವದಲ್ಲಿ 60 ಸಿಬ್ಬಂದಿಗಳು ಕಾರ್ಯಚರಣೆ‌ಯಲ್ಲಿ ಭಾಗಿಯಾಗಿದ್ದರು. ಆನೆ ಸೆರೆಯಲ್ಲಿ ಸಾಕಾನೆಗಳಾದ ಕ್ಯಾಪ್ಟನ್ ಅಭಿಮನ್ಯು, ಭೀಮಾ, ನೇಂದ್ರ ಸೇರಿ ನಾಲ್ಕು ಆನೆಗಳು ಭಾಗಿಯಾಗಿದ್ವು.

Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಕ್ಕೆ ಗೈರು ಹಾಜರಾಗುವ ಎಚ್ಚರಿಕೆ ಕೊಟ್ಟ ಆಂಬ್ಯುಲೆನ್ಸ್ ನೌಕರರ ಸಂಘ