Select Your Language

Notifications

webdunia
webdunia
webdunia
webdunia

ದುಬಾರಿ ದುನಿಯಾದ ನಡುವೆ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್..!

ದುಬಾರಿ ದುನಿಯಾದ ನಡುವೆ ರಾಜ್ಯದ ಜನರಿಗೆ ಶಾಕ್ ಮೇಲೆ ಶಾಕ್..!
bangalore , ಗುರುವಾರ, 29 ಜೂನ್ 2023 (17:56 IST)
ವಿದ್ಯುತ್ ಬಿಲ್ ಏರಿಕೆ ಆಯ್ತು , ಇದೀಗ ಹಾಲಿನ ದರ ಏರಿಕೆ 'ಬಿಸಿ' ರಾಜ್ಯದ ಜನರಿಗೆ ತಟ್ಟಲಿದೆ.ರಾಜ್ಯದ ಜನತೆಗೆ ಶೀಘ್ರದಲ್ಲೇ  ಮತ್ತೊಂದು ಬೆಲೆ ಏರಿಕೆ ಬರೆ ಕಾದಿದೆ.ಶೀಘ್ರದಲ್ಲೇ  ನಂದಿನಿ ಹಾಲಿನ ದರ ಪರಿಷ್ಕರಣೆ ಆಗಲಿದೆ.ಜುಲೈ 6 ರಂದೇ KMF ಹಾಲಿನ ದರ ಪರಿಷ್ಕರಣೆ ಭವಿಷ್ಯ ನಿರ್ಧಾರವಾಗಲಿದೆ.ನಂದಿನಿ ಹಾಲಿನ ದರ ಹೆಚ್ಚಳಕ್ಕೆ 14 ಹಾಲು ಒಕ್ಕೂಟಗಳಿಂದ ಪಟ್ಟು‌ ಹಿಡಿದಿದ್ದು,
ಹಾಲು ಒಕ್ಕೂಟದ ಬೇಡಿಕೆ ಸಂಬಂಧ  ಜುಲೈ 6ರಂದು ಕೆಎಂಎಫ್ ನಿಂದ ಮಹತ್ವದ ಸಭೆ ನಡೆಲಿದೆ.ನೂತನ ಕೆಎಂಎಫ್ ಎಂಡಿ,ಹಾಗೂ ಅಧ್ಯಕ್ಷರ ನೇತೃತ್ವದಲ್ಲಿ‌  ಕೆಎಂಎಫ್  ಮಹತ್ವದ ಸಭೆ ಜರುಗಲಿದೆ.ಸಭೆಯಲ್ಲಿ 14 ಹಾಲಿನ ಒಕ್ಕೂಟಗಳ ಅಧ್ಯಕ್ಷರು ಸಹ ಭಾಗಿಯಾಗಲಿದ್ದಾರೆ.ಜುಲೈ -6 ರಂದು ಕೆಎಂಎಫ್ ಕೇಂದ್ರ ಕಚೇರಿಯಲ್ಲಿ  ಬೋರ್ಡ್ ಮೀಟಿಂಗ್ ನಡೆಯಲಿದೆ.
 
ಕಳೆದೊಂದು ತಿಂಗಳಿನಿಂದ ಹಾಲಿನ ದರ ಹೆಚ್ಚಳಕ್ಕೆ  ಹಾಲು ಒಕ್ಕೂಟಗಳು ಒತ್ತಾಯಿಸಿದೆ.ಪ್ರತಿ ಲೀ. ಹಾಲಿಗೆ 5 ರೂ. ಹೆಚ್ಚಳಕ್ಕೆ ಒತ್ತಾಯ ಮಾಡಿದ್ದು,ಹೀಗಾಗಿ ಈ ಕುರಿತು ಕೆಎಂಎಫ್ ಅಧ್ಯಕ್ಷರ ನೇತೃತ್ವದಲ್ಲಿ ಹಾಲಿನ ದರ ಪರಿಷ್ಕರಣೆ ಕುರಿತು ಚರ್ಚೆ ನಡೆಸಲಾಗುತ್ತದೆ.ಕೆಎಂಎಫ್ ಬೋರ್ಡ್ ಸಭೆ ಬಳಿಕ ಸಿಎಂಗೆ ಅಧಿಕಾರಿಗಳು ಮನವಿ ಮಾಡಲಿದ್ದಾರೆ.ಕೆಂಎಎಫ್ ಅಧ್ಯಕ್ಷ ಭೀಮಾನಾಯ್ಕ್, ಎಂಡಿ ಜಗದೀಶ್ ನೇತೃತ್ವದಲ್ಲಿ ಸಿಎಂ ಭೇಟಿ ಸಾಧ್ಯತೆಇದೆ.ಈಗಾಗಲೇ 14 ಹಾಲಿನ ಒಕ್ಕೂಟ ಅಧ್ಯಕ್ಷರು ಹಾಲಿನ ದರ ಕೂಡಲೇ ಹೆಚ್ಚಿಸುವಂತೆ ಸಿಎಂಗೆ ಮನವಿ ಮಾಡಿದೆ.ಆದ್ರೆ ದರ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ ಸೂಚಿಸಿಲ್ಲ.ಹಾಲು ಒಕ್ಕೂಟಗಳ ಮನವಿ ಮೇರೆಗೆ ಕೆಎಂಎಫ್ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ಏರಿಕೆ ಸಂಬಂಧ ಸುದೀರ್ಘ ಚರ್ಚೆ ನಡೆಸಿ ನಂತರ ದರ ನಿಗದಿಮಾಡಲಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಸಾಮೂಹಿಕ ಪ್ರಾರ್ಥನೆಯಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ ,ಜಮೀರ್ ಅಹ್ಮದ್