Select Your Language

Notifications

webdunia
webdunia
webdunia
webdunia

ಆಧಾರ್-ಪಾನ್ ಲಿಂಕ್ ಮಾಡಿಸಲು ನಾಳೆಯೇ ಕೊನೆ ದಿನ!

ಆಧಾರ್-ಪಾನ್  ಲಿಂಕ್ ಮಾಡಿಸಲು ನಾಳೆಯೇ ಕೊನೆ ದಿನ!
bangalore , ಗುರುವಾರ, 29 ಜೂನ್ 2023 (15:56 IST)
ಆಧಾರ್-ಪಾನ್  ಲಿಂಕ್ ಮಾಡಿಸಲು ನಾಳೆಯೇ ಕೊನೆ ದಿನವಾಗಿದೆ.ಜೂನ್ 30ರಂದು ಸರ್ಕಾರ ಕೊನೆ ಗಡುವು ನೀಡಿದೆ.ಈ ಹಿಂದೆ ಮಾರ್ಚ್ 31 ಕೊನೆ ಗಡುವು ಇತ್ತು.ಆ ಬಳಿಕ  ಜೂನ್ 30ರವರೆಗೆ ಅವಧಿ ವಿಸ್ತರಿಸಲಾಗಿತ್ತು.ಸದ್ಯ ಲಿಂಕ್ ಮಾಡಿಸಲು 1000 ರೂ ಫೈನ್ ಇದೆ.ಇನ್ನೂ ಲಿಂಕ್ ಮಾಡಿಸದೇ ಇದ್ದರೆ ಪಾನ್ ಕಾರ್ಡ್ ಅಮಾನ್ಯವಾಗಲಿದೆ.ಈ ಬಗ್ಗೆ ಆದಾಯ ತೆರಿಗೆ ಇಲಾಖೆ ನೋಟೀಸ್ ಜಾರಿ ಮಾಡಿದೆ.ಬ್ಯಾಂಕ್ ವಹಿವಾಟುಗಳಿಗೆ ಅತಿ ಮುಖ್ಯವಾಗಿ  ಪಾನ್ ಕಾರ್ಡ್ ಬೇಕು.ವಿವಿಧ ಮೂಲಗಳಲ್ಲಿ ಹೂಡಿಕೆ ಮಾಡಲೂ ಪಾನ್ ಕಾರ್ಡ್ ಕಡ್ಡಾಯವಾಗಿದೆ.ಒಂದೊಮ್ಮೆ ಪಾನ್ ಕಾರ್ಡ್ ಆಮಾನ್ಯವಾದರೆ ಬಹುತೇಕ ಎಲ್ಲಾ ಆರ್ಥಿಕ  ವಹಿವಾಟುಗಳಿಗೆ ಬ್ರೇಕ್ ಬೀಳಲಿದೆ.
 
ಮುಂದಿನ ದಿನಗಳಲ್ಲಿ ಲಿಂಕ್ ಮಾಡಿಸಲು ಹತ್ತು ಸಾವಿರ ಫೈನ್ ಸಾಧ್ಯತೆ ಇದೆ.80ವರ್ಷ ಮೇಲ್ಪಟ್ಟವರು, ನಾನ್ ರೆಸಿಡೆಂಟ್ ಆಫ್ ಇಂಡಿಯನ್ಸ್ ಆಧಾರ್ ಪಾನ್ ಲಿಂಕ್ ಮಾಡಿಸಬೇಕಾಗಿಲ್ಲ.ಉಳಿದವರು ನೋಂದಾಯಿಸಿಕೊಳ್ಳಬೇಕಾಗಿದ್ದು ಕಡ್ಡಾಯವಾಗಿದೆ.ಈಗಾಗಲೇ ಲಿಂಕ್ ಆಗದೆ ಒಂದುಷ್ಟು ಜನ ಪರದಾಡುತ್ತಿದ್ದಾರೆ.ಆದರೆ ಮತ್ತೆ ಅವಧಿ ವಿಸ್ತರಣೆ ಬಹುತೇಕ ಡೌಟ್ ಆಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ವಪಕ್ಷದವರ ವಿರುದ್ದ ಮತ್ತೆ ಮುಂದುವರಿದ ರೇಣುಕಾಚಾರ್ಯ ವಾಗ್ದಾಳಿ