Publish Date: Mon, 14 Mar 2022 (20:03 IST)
Updated Date: Mon, 14 Mar 2022 (20:06 IST)
ಮಡಿಕೇರಿ ಉಪ ವಿಭಾಗ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆ ನಿವಾರಿಸುವ ಸಭೆಯು ಮಾರ್ಚ್, 15 ರಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಮಡಿಕೇರಿ ಉಪ ವಿಭಾಗ ಕಚೇರಿ ಆವರಣದಲ್ಲಿ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಹಾಗೆಯೇ ವಿರಾಜಪೇಟೆ ವ್ಯಾಪ್ತಿಯ ವಿದ್ಯುತ್ ಗ್ರಾಹಕರ ಕುಂದು ಕೊರತೆಗಳನ್ನು ನಿವಾರಿಸಲು ಸಭೆಯು ಮಾರ್ಚ್, 15 ರಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ಗಂಟೆವರೆಗೆ ವಿರಾಜಪೇಟೆ ಉಪವಿಭಾಗ ಕಚೇರಿ ಆವರಣದಲ್ಲಿ ಸೆಸ್ಕ್ ಇಇ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಮಡಿಕೇರಿ ಉಪ ವಿಭಾಗ(ಮಡಿಕೇರಿ ತಾಲ್ಲೂಕು) ವ್ಯಾಪ್ತಿಯ ಮತ್ತು ವಿರಾಜಪೇಟೆ ಉಪ ವಿಭಾಗ (ವಿರಾಜಪೇಟೆ ತಾಲ್ಲೂಕು) ವ್ಯಾಪ್ತಿಯ ಸಾರ್ವಜನಿಕರು/ ವಿದ್ಯುತ್ ಗ್ರಾಹಕರ ವಿದ್ಯುಚ್ಛಕ್ತಿಗೆ ಸಂಬಂಧಿಸಿದ ಸಮಸ್ಯೆ ಅಥವಾ ದೂರುಗಳು ಇದ್ದಲ್ಲಿ ಈ ಸಭೆಯಲ್ಲಿ ಚರ್ಚಿಸಿ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕರು ಈ ಸಭೆಗೆ ಹಾಜರಾಗುವಂತೆ ಸೆಸ್ಕ್ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಅವರು ಕೋರಿದ್ದಾರೆ.