ಕರ್ನಾಟಕ ಜಾನಪದ ಅಕಾಡೆಮಿಯ 2020 ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ಮೌಲ್ಯಮಾಪಕರಿಂದ ಬಂದಿರುವ ವರದಿಯಂತೆ ಕೃತಿಗಳು ಬಹುಮಾನಕ್ಕೆ ಆಯ್ಕೆಯಾಗಿದೆ.
ಪುಸ್ತಕ ಬಹುಮಾನ ಮೊತ್ತ ತಲಾ ಪುಸ್ತಕಕ್ಕೆ ರೂ.25 ಸಾವಿರಗಳ ಜೊತೆಗೆ ಬಹುಮಾನಿತರಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. 2022 ರ ಏಪ್ರಿಲ್ ತಿಂಗಳಿನಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುವ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಪುಸ್ತಕ ಬಹುಮಾನ ನೀಡಲಾಗುವುದು.
ಅಮೋಘ ಸಿದ್ಧ ಜನಪದ ಮಹಾಕಾವ್ಯ ಪುಸ್ತಕ, ಪದ್ಯ ಪ್ರಕಾರ ಡಾ.ಚನ್ನಪ್ಪ ಕಟ್ಟಿ, ಸಂಚಿತ, ಕಲ್ಯಾಣ ನಗರ ಸಿಂದಗಿ-586128. ಹಾಡು ಕಲಿಸಿದ ಹರ(ಜನಪದ ಮಹಾಕಾವ್ಯಗಳು: ಸಂಸ್ಕøತಿ ಸಂಕಥನ) ವಿಚಾರ ವಿಮರ್ಶೆ ಸಂಶೋಧನೆ ಸುರೇಶ್ ನಾಗಲಮಡಿಕೆ, ತಂದೆ ನಾಗರಾಜಪ್ಪ, ನಾಗಲಮಡಿಕೆ, ಹೋಬಳಿ ಪಾವಗಡ ತುಮಕೂರು-561202 ಮತ್ತು ಕಲಾ ಸಂಚಯ ದಕ್ಷಿಣ ಭಾರತದ ಕೆಲವು ಅನುಷ್ಠಾನ ಕಲೆಗಳು ಸಂಕೀರ್ಣ ಪ್ರಕಾರ, ಡಾ.ತಲ್ಲೂರು ಶಿವರಾಮ ಶೆಟ್ಟಿ, ಕನಕನಿವಾಸ, ವಳಕಾಡು, ಉಡುಪಿ-576101.