ಎರಡು ದಶಕಗಳಲ್ಲಿ ಇದೇ ಮೊದಲ ಬಾರಿಗೆ ಫೇಸ್‌ಬುಕ್ ತನ್ನ ಸಕ್ರಿಯ ಬಳಕೆದಾರರ ಸಂಖ್ಯೆಯಲ್ಲಿ ಭಾರೀ ಇಳಿಕೆ ಕಂಡಿದೆ. ಇದರಿಂದಾಗಿ ಭಾರೀ ಪ್ರಮಾಣದಲ್ಲಿ ಆದಾಯ ಕುಸಿದಿದೆ.
2021 ರ ಡಿಸೆಂಬರ್‌ನ ಮೂರನೇ ತ್ರೈಮಾಸಿಕಕ್ಕೆ ಫೇಸ್‌ಬುಕ್ ಬಳಕೆದಾರರ ಸಂಖ್ಯೆ 192.3 ಕೋಟಿಗೆ ಕುಸಿತ ಕಂಡಿದೆ. ಈ ಹಿಂದಿನ ತ್ರೈಮಾಸಿಕದಲ್ಲಿ ಫೇಸ್‌ಬುಕ್‌ಗೆ 193ಕೋಟಿ ಬಳಕೆದಾರರಿದ್ದರು ಎಂದು ಮೆಟಾ ನೆಟ್‌ವರ್ಕ್ಸ್ ಮಾಹಿತಿ ನೀಡಿದೆ.
ಮೆಟಾ ನೆಟ್‌ವರ್ಕ್ಸ್‌ನ ಈ ಮಾಹಿತಿ ಷೇರುಪೇಟೆಯಲ್ಲಿ ವ್ಯತಿರಿಕ್ತ ಪರಿಣಾಮ ಬೀರಿದ್ದು, ನಿನ್ನೆ ಒಂದೇ ದಿನದಲ್ಲಿ ಫೇಸ್‌ಬುಕ್ ಷೇರುಗಳ ಮೌಲ್ಯ ಶೇ,26ರಷ್ಟು ಕುಸಿತ ಕಂಡಿದೆ. ಇದರಿಂದ ಕಂಪನಿಗೆ 16 ಲಕ್ಷ ಕೋಟಿ ರೂ. ನಷ್ಟವಾಗಿದೆ ಎಂದು ಹೇಳಲಾಗಿದೆ.
ಟಿಕ್‌ಟಾಕ್, ಯೂಟ್ಯೂಬ್ ಹಾಗೂ ಇತರೆ ಜಾಲತಾಣಗಳೊಂದಿಗೆ ಸ್ಪರ್ಧೆ ಹೆಚ್ಚಾಗಿದ್ದು, ಆದಾಯ ಕುಸಿತಕ್ಕೆ ಕಾರಣ ಎಂದು ಹೇಳಲಾಗಿದೆ. ಬಳಕೆದಾರರ ಸಂಖ್ಯೆ ಕಡಿಮೆಯಾಗುತ್ತಿದ್ದಂತೆ, ಜಾಹೀರಾತುಗಳ ಸಂಖ್ಯೆಯೂ ಕಡಿಮೆಯಾಗಬಹುದು ಎಂದು ಹೇಳಲಾಗಿದೆ. ಫೇಸ್‌ಬುಕ್‌ನ 16 ಲಕ್ಷ ಕೋಟಿ ರೂ. ಸಂಪತ್ತು ಕರಗಿ ಹೋಗಿದ್ದರಿಂದ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಅವರ ವೈಯಕ್ತಿಕ ನಿವ್ವಳ ಮೌಲ್ಯ ಆಸ್ತಿಯಲ್ಲಿ ಶೇ.23.24 ರಷ್ಟು ಕಳೆದುಕೊಂಡಿದ್ದಾರೆ.