Select Your Language

Notifications

webdunia
webdunia
webdunia
webdunia

PSI ನೇಮಕಾತಿ ಅಕ್ರಮ-ಟಾಪರ್ಸ್ ವಿಚಾರಣೆ

pSI recruitment illegal-toppers inquiry
bangalore , ಬುಧವಾರ, 20 ಏಪ್ರಿಲ್ 2022 (18:49 IST)
ರಾಜ್ಯ ರಾಜಕಾರಣದಲ್ಲಿ ಕೋಲಾಹಲ ಎಬ್ಬಿಸಿರುವ ಪಿಎಸ್‌ಐ ನೇಮಕಾತಿ ಹಗರಣವು ಈಗ ಪರೀಕ್ಷೆಯ ಟಾಪರ್‌ಗಳ ಕೊರಳಿಗೆ ಸುತ್ತಿಕೊಳ್ಳಲಾರಂಭಿಸಿದೆ. ಸಿಐಡಿ ಪೊಲೀಸರು ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಟಾಪ್‌ 50 ಅಭ್ಯರ್ಥಿಗಳಿಗೆ ನೋಟಿಸ್‌ ಜಾರಿ ಮಾಡಿ ತನಿಖೆಗೆ ಹಾಜರಾಗುವಂತೆ ಸೂಚಿಸಲಾಗಿತ್ತು. ಸಿಐಡಿ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ. 545 ಅಭ್ಯರ್ಥಿಗಳ ಪೈಕಿ 50 ಮಂದಿಗೆ ನೋಟಿಸ್‌ ಜಾರಿಯಾಗಿದ್ದು, ನೋಟೀಸ್‌ ನೀಡಿದ 50 ಅಭ್ಯರ್ಥಿಗಳ ಪೈಕಿ 45 ಅಭ್ಯರ್ಥಿಗಳು ಬೆಂಗಳೂರಿನ ಸಿಐಡಿ ಪೊಲೀಸ್‌ ಕಚೇರಿಗೆ ವಿಚಾರಣೆಗಾಗಿ ಹಾಜರಾಗಿದ್ದಾರೆ. ಒಎಂಆರ್‌ ಕಾರ್ಬನ್‌ ಪ್ರತಿಯೊಂದಿಗೆ ಹಾಜರಾಗುವಂತೆ ಸೂಚನೆ ನೀಡಲಾಗಿತ್ತು. ಬೆಳಗ್ಗೆ 10ಕ್ಕೆ ಸಿಐಡಿ ಡಿವೈಎಸ್‌ಪಿ ಪಿ. ನರಸಿಂಹ ಮೂರ್ತಿ ಅವರ ಸಮಕ್ಷಮ ವಿಚಾರಣೆ ನಡೆಯುತ್ತಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

‘ಕಾಂಗ್ರೆಸ್‍ನವರು ಪಾಕಿಸ್ತಾನದ ಕಾನೂನು ನಂಬ್ತಾರೆ’