ಕಳೆದ ಕೆಲವು ದಿನಗಳಿಂದ ಸೈಲೆಂಟಾಗಿದ್ದ ಪಿಎಸ್ಐ ಅಭ್ಯರ್ಥಿಗಳು ಇವತ್ತು ಮತ್ತೆ ಭುಗಿಲೆದ್ದ ಆಕ್ರೋಶ ಹೊರ ಹಾಕಿದ್ರು . ಮರು ಪರೀಕ್ಷೆಯನ್ನು ಮತ್ತೆ ಮರುಪರಿಶೀಲಿಸಿ ಅಂತ ಹೇಳಿ ಸಿಎಂ ಬಳಿ ಹೇಳಿಕೊಂಡರು. ಹೌದು ಕಳೆದ ತಿಂಗಳು ಉಪವಾಸವನ್ನು ಮಾಡಿ ಪಿಎಸ್ಐ ಅಭ್ಯರ್ಥಿಗಳು ಪ್ರೊಟೆಸ್ಟ್ ನಡೆಸಿದ್ದರು ಆದ್ರೂ ಕೂಡ ಯಾವುದೇ ಪ್ರಯೋಜನ ಆಗಿರಲಿಲ್ಲ. ಹೀಗಾಗಿ ಇವತ್ತು ಮತ್ತೆ ಸಮತಾ ಸೈನಿಕ ದಳ ನೇತೃತ್ವದಲ್ಲಿ ಪ್ರತಿಭಟನೆಯನ್ನು ನಡೆಸಿದ್ದಾರೆ. 30 ರಿಂದ 35 ಅಭ್ಯರ್ಥಿ ಗಳು ಮಾಡಿದ ತಪ್ಪಿಗೆ ಪ್ರಮಾಣಿಕರ ಬದುಕು ಬೀದಿಗೆ ಬಂದಿದೆ . ಹೀಗಾಗಿ ಇಂದು ಸುಮಾರು 300 ಕ್ಕೂ ಹೆಚ್ಚು ಪ್ರಾಮಾಣಿಕ ಅಭ್ಯರ್ಥಿಗಳು ನಗರದ ಫ್ರಿಡಂ ಪಾರ್ಕ್ ನಲ್ಲಿ ಪ್ರತಿಭಟನೆ ನಡೆಸಿದ್ರು .
ಪ್ರಾಮಾಣಿಕವಾಗಿ ಹಗಲು ಇರಲು , ಕಷ್ಟ ಪಟ್ಟು ಓದಿದ PSI ಅಭ್ಯರ್ಥಿಗಳಿಗೆ ಶಿಕ್ಷೆ ಆಗುತ್ತಿದೆ. ಮೋಸ ಮಾಡಿದವರಿಗೆ ಯಾವುದೇ ಕ್ರಮ ಹಾಗಿಲ್ಲ ಅಂತ ಆಕ್ರೋಶ ಬರಿತರಾಗಿದ್ರು . ನಾವು ನಿಯತ್ತಿನಿಂದ ಪರೀಕ್ಷೆ ಬರೆದು ಪಾಸ್ ಆಗಿದ್ದೇವೆ. ಮೂರು ವರ್ಷಗಳ ಕಾಲ ಸತತವಾಗಿ ಓದಿದ್ದೆವು. ಹೀಗಾಗಿ ಸರ್ಕಾರ ಮರು ಪರೀಕ್ಷೆಯ ಆದೇಶವನ್ನ ರದ್ದು ಮಾಡಬೇಕು ಅಂತ ಹೇಳಿ ಆಗ್ರಹಿಸಿದರು. ಪಿಎಸ್ಐ ಅಭ್ಯರ್ಥಿಗಳ ಪ್ರತಿಭಟನೆಗೆ ಡಾಕ್ಟರ್ ವೆಂಕಟಸ್ವಾಮಿ ಸಮತಾ ಸೈನಿಕ ದಳ , ಹಾಗೂ ಬಿ ಟಿ ಲಲಿತಾ ನಾಯಕ್ ಅವರು ಕೂಡ ಪ್ರತಿಭಟನೆಗೆ ಸಾಥ್ ನೀಡಿದರು.
ಮರು ಪರೀಕ್ಷೆ ರದ್ದು ಮಾಡುವ ಭರವಸೆ ಕೊಡಲ್ಲ ಎಂದ ಸಿಎಂ
ಇನ್ನು ಇವತ್ತು ಫ್ರೀಡಂ ಪಾರ್ಕ್ ನಲ್ಲಿ ಮೂರು ಪ್ರೊಟೆಸ್ಟ್ ಗಳು ಇದ್ದ ಕಾರಣ ಸಿಎಂ ಅವ್ರು ಫ್ರೀಡಂ ಪಾರ್ಕಿಗೆ ಆಗಮಿಸಿದ್ದರು. ಇದೇ ವೇಳೆ ಪಿಎಸ್ಐ ಅಭ್ಯರ್ಥಿಗಳ ಪ್ರತಿಭಟನಾ ಸ್ಥಳಕ್ಕೆ ಕೂಡ ಆಗಮಿಸಿ ಮನವಿ ಪತ್ರವನ್ನು ಸ್ವೀಕರಿಸಿದರು. ಬಳಿಕ ಮಾತನಾಡಿಮನವಿಯನ್ನ ಸಂಪೂರ್ಣವಾಗಿ ಪರಿಶೀಲನೆ ಮಾಡುತ್ತೇನೆ ತನಿಖೆ ಮುಗಿಯುವವರೆಗೂ ಕೂಡ ಏನು ಹೇಳುವುದಕ್ಕೆ ಸಾಧ್ಯ ಇಲ್ಲ . PSI ಸಮಾಧಾನದಿಂದ ಇರಬೇಕು. ಈಗ ಯಾವುದೇ ಭರವಸೆ ಕೊಡಲು ಸಾಧ್ಯ ಇಲ್ಲ ಅಂತ ಹೇಳಿ ತಿಳಿಸಿದ್ದಾರೆ.
ಇನ್ನು ಪ್ರತಿಭಟನೆಯಲ್ಲಿ ಭಾಗಿಯಾದ ಅಭ್ಯರ್ಥಿ ಗಳು ನಾವು ನ್ಯಾಯಯುತವಾಗಿ ಇದ್ದೇವೆ. ಯಾರು ಅಕ್ರಮದಲ್ಲಿ ಭಾಗಿಯಾಗಿದ್ದರೆ ಅವರನ್ನು ಬಂಧಿಸಲಿ. ನಾವು ತಪ್ಪು ಮಾಡಿದ್ರೆ ನಮ್ಮನ್ನು ಬಂಧಿಸಲಿ. ಅದು ಬಿಟ್ಟು ಪರೀಕ್ಷೆ ಏಕಾಏಕಿ ರದ್ದು ಮಾಡಿದ್ದು ತಪ್ಪು. ನಮಗೆ ಅನ್ಯಾಯ ಆಗಿದೆ, ಭವಿಷ್ಯ ಮಂಕಾಗಿದೆ. ನಾವೆಲ್ಲ ಬಡವರು. ಕಷ್ಟ ಪಟ್ಟು ಓದಿ ಪಾಸಾಗಿದ್ದೇವೆ. ಟು ಪರೀಕ್ಷೆ ರದ್ದು ಮಾಡುವವರೆಗೂ ಕೂಡ ಪ್ರತಿಭಟನೆ ನಿಲ್ಲಿಸಲು ಅಂತ ಹೇಳಿ ಎಚ್ಚರಿಕೆಯನ್ನು ನೀಡಿದರು. ಒಟ್ಟಿನಲ್ಲಿ ಎಲ್ಲಾ ಅಂದುಕೊಂಡತ್ತೆ ಆಗಿದ್ರೆ ಕೆಲವೇ ದಿನಗಳಲ್ಲಿ ಇವರೆಲ್ಲ ಖಾಕಿ ಧರಿಸಿ ಖಡಕ್ ಆಫೀಸರ್ ಆಗಿತ್ತಿದ್ರು . ಆದ್ರೆ ಈಗ ಇವರಿಗೆಲ್ಲಾ ದಿಕ್ಕು ತೋಚದಂತಗಿದೆ . ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸುತ್ತಿದ್ದಾರೆ.