Select Your Language

Notifications

webdunia
webdunia
webdunia
webdunia

ಪಿಎಸ್‌ ಐ ನೇಮಕಾತಿ ಅಕ್ರಮ: ನೇಮಕಾತಿ ಕೇಂದ್ರದ 12 ಎಡಿಜಿಪಿ ಅಮಾನತು

PSI exam scam transfer suspend ಅಮಾನತು ಪಿಎಸ್‌ ಐ ನೇಮಕಾತಿ ಅಕ್ರಮ
bengaluru , ಶನಿವಾರ, 7 ಮೇ 2022 (14:30 IST)
ಪಿಎಸ್‌ ಐ ನೇಮಕಾತಿ ಅಕ್ರಮ ಪ್ರಕರಣ ತನಖೆ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ನೇಮಕಾತಿ ಕೇಂದ್ರದ 12 ಮಂದಿಯನ್ನು ಅಮಾನತು ಮಾಡಲಾಗಿದೆ.
ಪರೀಕ್ಷಾ ಕೇಂದ್ರದ ಉಸ್ತುವಾರಿ ವೈಜನಾಥ್‌ ರೇವೂರ್‌ 17 ಎಡಿಜಿಪಿಗಳ ಪೈಕಿ 12 ಎಡಿಜಿಪಿ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಇದೇ ವೇಳೆ ಪರೀಕ್ಷಾ ಕೇಂದ್ರದ ಮುಖ್ಯಸ್ಥ ವೈಜನಾಥ್‌ ಬಿರಾದರ್‌ ಅವರನ್ನು ಸಿಐಡಿ ಪೊಲೀಸರು ನಿನ್ನೆ ರಾತ್ರಿ ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರಪಡಿಸಲಿದ್ದಾರೆ. ವೈಜನಾಥ್‌ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.
ವೈಜನಾಥ್‌ ರೇವೂರು ಪಾಟಿಲೆಟ್ನಿಕ್‌ ಕೇಂದ್ರದ ಉಸ್ತುವಾರಿ ಆಗಿದ್ದು, ಈ ಪರೀಕ್ಷಾ ಕೇಂದ್ರದಲ್ಲಿ ಆಕ್ರಮ ಆಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬಂಧಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

2 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಅನಾಹುತ: 7 ಮಂದಿ ಸಜೀವದಹನ