ಕರ್ನಾಟಕ ರಾಜ್ಯದಲ್ಲಿ 21 ಅಂಗನವಾಡಿ ತರಬೇತಿ ಕೇಂದ್ರಗಳನ್ನ ಮುಚ್ಚಿರುವ ಬಗ್ಗೆ ಹಾಗೂ ಕಳೆದ ಮೂರು ವರ್ಷಗಳಿಂದ ತರಬೇತಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ 189 ಜನ ಸಿಬ್ಬಂದಿಗೆ ವೇತನ ನೀಡದಿರುವ ಬಗ್ಗೆ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಅಧ್ಯಕ್ಷರಾದ ಜಿ.ಆರ್ ಶಿವಶಂಕರ್ ಪತ್ರಿಕಾಗೋಷ್ಠಿ ನಡೆಸಿದ್ದಾರೆ. ಕಳೆದ ಮೂರು ವರ್ಷಗಳಿಂದ ತರಬೇತಿ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಗಳಿಗೆ ಈ ಕೂಡಲೇ ವೇತನ ನೀಡಬೇಕು,ಅಗತ್ಯವಾಗಿ ತರಬೇತಿ ಕೇಂದ್ರಗಳು ಹೀಗೆ ಮುಂದುವರಿಯಬೇಕು, ಈ ತರಬೇತಿ ಸಿಬ್ಬಂದಿಗಳಲ್ಲಿ ಶೇ 99 ರಷ್ಟು ಮಹಿಳೆಯರೇ ಹೆಚ್ಛಾಗಿ ಕೆಲಸ ಮಾಡುತ್ತಿದ್ದಾರೆ ಹೀಗಾಗಿ ಸರ್ಕಾರ ಎಲ್ಲವನ್ನೂ ಗಮನದಲ್ಲಿಕೊಂಡು ಸಮಸ್ಯೆಗಳನ್ನ ಈ ಕೂಡಲೇ ಪರಿಹರಿಸಬೇಕು ಇಲ್ಲವಾದ್ದಲ್ಲಿ ಮುಂದಿನ ದಿನಗಳಲ್ಲಿ ಬೃಹತ್ ಪ್ರತಿಭಟನೆ ಮಾಡುತ್ತೇವೆ ಎಂದು ಜಿ.ಆರ್ ಶಿವಶಂಕರ್ ಆಗ್ರಹಿಸಿದ್ದಾರೆ.