ಗೂಡ್ಸ್ ಶೆಡ್ ರೋಡ್ ಇಂದಿನಿಂದ ಸಂಚಾರಕ್ಕೆ ಮುಕ್ತವಾಗಿದ್ದು, ವಾಹನ ಸವಾರರಲ್ಲಿ ಸಂತಸ ಸಮಾಧಾನ ಮನೆ ಮಾಡಿದ್ದು, ನಿಟ್ಟುಸಿರು ಬಿಟ್ಟಿದ್ದಾರೆ. ಗೂಡ್ಸ್ ಶೆಡ್ ರಸ್ತೆಯೂ ಮೈಸೂರು ರಸ್ತೆ-ಚಾಮರಾಜಪೇಟೆಯಿಂದ ಕೆಂಪೇಗೌಡ ಬಸ್ ನಿಲ್ದಾಣ ಸೇರಿದಂತೆ ವಿವಿಧ ಕಡೆ ಪ್ರಮುಖ ರಸ್ತೆಗಳಿಗೆ ಇದು ಸಂಪರ್ಕ ಕಲ್ಪಿಸುತ್ತದೆ. ಈ ಗೂಡ್ಸ್ ಶೆಡ್ ರಸ್ತೆಗೆ 11 ಕೋಟಿ ವೆಚ್ಚದಲ್ಲಿ 1.3 ಕಿಲೋ ಮೀಟರ್ ಉದ್ಧಕ್ಕೆ ವೈಟ್ ಟ್ಯಾಪಿಂಗ್ ರಸ್ತೆ ಕಾಮಗಾರಿ ನಡೆಯುತ್ತಿತ್ತು. ಈ ಕಾರಣಕ್ಕೆ ಗೂಡ್ಸ್ ಶೆಡ್ ರಸ್ತೆಯಲ್ಲಿ ಕೆಲ ಕಾಲ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಹೀಗಾಗಿ ಭಾರಿ ಟ್ರಾಫಿಕ್ ಜಾಮ್ನಿಂದಾಗಿ ವಾಹನ ಸವಾರರು ಪರದಾಟ ನಡೆಸಿದ್ದರು. ಮೂರು ತಿಂಗಳಲ್ಲಿ ಮುಗಿಯಬೇಕಿದ್ದ ಗೂಡ್ಸ್ ಶೆಡ್ ರಸ್ತೆಯ ಕಾಮಗಾರಿ ಕೊನೆಗೂ ಮುಕ್ತಾಯಗೊಂಡಿದ್ದು, ಇಂದಿನಿಂದ ಸಾರ್ವಜನಿಕರ ಓಡಾಟಕ್ಕೆ ಮುಕ್ತವಾಗಿದೆ