Select Your Language

Notifications

webdunia
webdunia
webdunia
webdunia

ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ

ಅಂಗನವಾಡಿ ಕಾರ್ಯಕರ್ತೆ, ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
bangalore , ಮಂಗಳವಾರ, 1 ಮಾರ್ಚ್ 2022 (19:16 IST)
ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನೆಯ  6 ಅಂಗನವಾಡಿ ಕಾರ್ಯಕರ್ತೆ ಹಾಗೂ 29 ಅಂಗನವಾಡಿ ಸಹಾಯಕಿಯರ ಹುದ್ದೆಯನ್ನು ಭರ್ತಿ ಮಾಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. 
ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರಿಗೆ ಗೌರವಧನ ಆಧಾರದ ಮೇಲೆ ಕಾರ್ಯಕರ್ತೆಯರಿಗೆ ರೂ.10 ಸಾವಿರ ಮತ್ತು ಸಹಾಯಕಿಯರಿಗೆ ರೂ.5 ಸಾವಿರ, ಮಿನಿ ಅಂಗನವಾಡಿ ಕಾರ್ಯಕರ್ತೆ ರೂ.6250 ವನ್ನು ಪಾವತಿಸಲಾಗುವುದು. 
ಅಂಗನವಾಡಿ ಕಾರ್ಯಕರ್ತೆ ಹುದ್ದೆ ಖಾಲಿ ಇರುವ ಕೇಂದ್ರಗಳು ಹಚ್ಚಿನಾಡು, ಬೀರುಗ 1, ವೆಸ್ಟ್‍ನೆಮ್ಮಲೆ, ಕಾನೂರು ಕಾಲೋನಿ, ಕೋಣನಕಟ್ಟೆ 2, ಮಗ್ಗುಲ.       
       ಅಂಗನವಾಡಿ ಸಹಾಯಕಿಯರ ಹುದ್ದೆ ಖಾಲಿ ಇರುವ ಕೇಂದ್ರಗಳು ಕುಂದ, ಕಾಟಿಗುಂಡಿ ಪೈಸಾರಿ, ಬಿ.ಶೆಟ್ಟಿಗೇರಿ, ದೇವನೂರು 2, ತೆರಾಲು 2, ವಿ.ಬಾಡಗ, ಗುಡ್ಲೂರು,ಕೊಪ್ಪ,  ಗದ್ದೆಮನೆ, ಹೊಸನಲ್ಲಿಕೋಟೆ, ಆಂಗೋಡು, ಬೇಗೂರು 1, ಹೈಸೋಡ್ಲೂರು, ಬೆಳ್ಳುಮಾಡು 1, ಬೇತ್ರಿ,  ಪಡಚಿಕಾಡು, ಮೈಲಾಪುರ, ನಾಲ್ಕೇರಿ 1, ಪಾಲ್ದಾಳ, ಪೊನ್ನಂಪೇಟೆ 5, ಪೊನ್ನಂಪೇಟೆ 3, ದುಬಾರೆ, ಕುರ್ಚಿ 2, ಬೀರುಗ 1, ಕುಂದೂರು, ಟಿ.ಶೆಟ್ಟಿಗೇರಿ 1, ಸಣ್ಣರೇಷ್ಮೆ, ಬಂಗಾಳ ಬೀದಿ, ಗಾಂಧಿನಗರ.
       ಆನ್‍ಲೈನ್‍ನಲ್ಲಿ ಅರ್ಜಿ ಸಲ್ಲಿಸಲು ಮಾರ್ಚ್, 29 ಕೊನೆಯ ದಿನವಾಗಿದೆ. ಅರ್ಜಿ ಸಲ್ಲಿಸಲು ಕಾರ್ಯಕರ್ತೆ ಹುದ್ದೆಗೆ 10ನೇ ತರಗತಿ ತೇರ್ಗಡೆ ಹಾಗೂ ಸಹಾಯಕಿ ಹುದ್ದೆಗೆ 4 ರಿಂದ 9ನೇ ತರಗತಿಯೊಳಗೆ ವ್ಯಾಸಂಗ ಮಾಡಿರಬೇಕು. 18 ರಿಂದ 35 ವರ್ಷ ವಯೋಮಿತಿಯೊಳಗಿರುವ ಹಾಗೂ ಅಂಗನವಾಡಿ ಕೇಂದ್ರಕ್ಕೆ ಒಳಪಟ್ಟ ಗ್ರಾಮ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವೆಬ್‍ಸೈಟ್ www.anganwadirecruit.kar.nic.in  ನಲ್ಲಿ ಅರ್ಜಿ ಭರ್ತಿ ಮಾಡಬಹುದಾಗಿದೆ. ಆನ್‍ಲೈನ್‍ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕಾಗಿದ್ದು, ಇತರೆ ಯಾವುದೇ ರೂಪದ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಪರಿಗಣಿಸುವುದಿಲ್ಲ.  ಹೆಚ್ಚಿನ ಮಾಹಿತಿಗೆ ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾ ಕಚೇರಿಯ ದೂ.ಸಂ.  08274-249010 ನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದು ಎಂದು ಪೊನ್ನಂಪೇಟೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಅವರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಉಕ್ರೇನ್ನಲ್ಲಿ ಕನ್ನಡಿಗ ನವೀನ್ ಸಾವು - ಕರೆ ಮಾಡಿ ಸಿಎಂ ಬೊಮ್ಮಾಯಿ ಸಾಂತ್ವನ