Publish Date: Tue, 12 May 2020 (10:13 IST)
Updated Date: Tue, 12 May 2020 (10:15 IST)
ಚಿತ್ರದುರ್ಗ : ಕ್ವಾರಂಟೈನ್ ಗೆ ಕೋಟೆನಾಡು ಹೊಸದುರ್ಗದಲ್ಲೂ ವಿರೋಧ ವ್ಯಕ್ತವಾಗಿದ್ದು, ಕ್ವಾರಂಟೈನ್ ಗೆ ವಿರೋಧಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ.
ಕೊರೊನಾ ಶಂಕಿತರನ್ನು ಹೊಸದುರ್ಗದ ತಂಡಗ ಗ್ರಾಮದ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿಡಲು ನಿರ್ಧರಿಸಲಾಗಿತ್ತು. ಆದರೆ ಗ್ರಾಮಸ್ಥರು ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.
ಪೊಲೀಸರು, ಅಧಿಕಾರಿಗಳ ಜತೆ ವಾಗ್ವಾದ ನಡೆದಿದ್ದು, ಗ್ರಾಮಸ್ಥರ ಒತ್ತಡಕ್ಕೆ ಅಧಿಕಾರಿಗಳು ಮಣಿದು ಕ್ವಾರಂಟೈನ್ ಸ್ಥಳಾಂತರಕ್ಕೆ ನಿರ್ಧಾರ ಮಾಡಲಾಗಿದೆ. ಚಿತ್ರದುರ್ಗ ತಾಲೂಕಿನ ದೊಡ್ಡಸಿದ್ದವ್ವನಹಳ್ಳಿಗೆ ಕ್ವಾಂಟೈನ್ ಶಿಫ್ಟ್ ಮಾಡಲಾಗಿದೆ.