Select Your Language

Notifications

webdunia
webdunia
webdunia
webdunia

ಗೌರಿ ಲಂಕೇಶ್ ಅಭಿಮಾನಿಗಳಿಂದ ಹೋರಾಟ

ಗೌರಿ ಲಂಕೇಶ್ ಅಭಿಮಾನಿಗಳಿಂದ ಹೋರಾಟ
ಕೊಪ್ಪಳ , ಗುರುವಾರ, 6 ಸೆಪ್ಟಂಬರ್ 2018 (16:04 IST)
ಗೌರಿ ಲಂಕೇಶ್ ಅವರ ಹತ್ಯೆ ಖಂಡನೀಯ ಎಂದು ಗೌರಿ ಅಭಿಮಾನಿಗಳಿಂದ ಹೋರಾಟ ಮುಂದುವರೆದಿದೆ.

ಕೊಪ್ಪಳದಲ್ಲಿ ಹೋರಾಟ ಶುರುವಾಗಿದೆ. ಗಾಂಧಿಯಿಂದ ಗೌರಿ ವರೆಗಿನ ಹತ್ಯೆ ಖಂಡಿಸಿ ಕೊಪ್ಪಳದಲ್ಲಿ ಹೋರಾಟ ನಡೆಯಿತು. ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ನೂರಾರು ಹೋರಾಟಗಾರರು ಭಾಗಿಯಾಗಿದ್ದರು. ನಾನೂ ಗೌರಿ ನಾವೆಲ್ಲ ಗೌರಿ ಎಂಬ ಶಿಷೀ೯ಕೆಯಿಂದ ಹೋರಾಟ, ಪ್ರತಿಭಟನೆ ನಡೆಯಿತು. ಡಾ.ಎಂ.ಎಂ. ಕಲಬುರ್ಗಿ  ಮತ್ತು ಪತ್ರಕತೆ೯ ಗೌರಿ ಲಂಕೇಶ್ ರನ್ನು ಹೋರಾಟಗಾರರು ನೆನೆದರು.

ವ್ಯಕ್ತಿಗಳನ್ನ ಕೊಲೆ ಮಾಡಿದ್ದೀರಿ. ಆದರೆ ಅವರ ವಿಚಾರಗಳನ್ನಲ್ಲ ಎಂದು ಕ್ರಾಂತಿ ಗೀತೆಗಳ ಮೂಲಕ ಕೊಪ್ಪಳದಲ್ಲಿ ಪ್ರಗತಿಪರ ಹೋರಾಟಗಾರರಿಂದ ಕೊಲೆಮಾಡಿದ ಆರೋಪಿಗಳಿಗೆ ಧಿಕ್ಕಾರ ಕೂಗಲಾಯಿತು.

ಹೋರಾಟಗಾರರು ಕ್ರಾಂತಿ ಗೀತೆಗಳನ್ನು ಹಾಡಿದರು. ದೀಪಗಳನ್ನ ಹಚ್ಚಿ ಪ್ರತಿಭಟನೆ ನಡೆಸಿ ಗಮನ ಸೆಳೆದರು.



Share this Story:

Follow Webdunia kannada

ಮುಂದಿನ ಸುದ್ದಿ

ಶಿಕ್ಷಕರ ದಿನಾಚರಣೆ ಮಾರನೇ ದಿನ: ಶಾಲೆಯಲ್ಲೇ ನೇಣಿಗೆ ಶರಣಾದ ಶಿಕ್ಷಕ