Select Your Language

Notifications

webdunia
webdunia
webdunia
webdunia

ರಾಷ್ಟ್ರ ಧ್ವಜಕ್ಕೆ ಅವಮಾನ: ಪ್ರತಿಭಟನೆ

ರಾಷ್ಟ್ರ ಧ್ವಜಕ್ಕೆ ಅವಮಾನ: ಪ್ರತಿಭಟನೆ
ಬಾಗಲಕೋಟೆ , ಶನಿವಾರ, 1 ಸೆಪ್ಟಂಬರ್ 2018 (19:36 IST)
ಪಂಚಾಯತಿ ಆವರಣದಲ್ಲಿ ದಿನನಿತ್ಯ ಬೆಳಿಗ್ಗೆ ದ್ವಜಾರೋಹಣ ಮಾಡಿ ಸಂಜೆಯ ಹೊತ್ತಿಗೆ ಧ್ವಜವನ್ನು ಇಳಿಸಬೇಕು. ಆದರೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೋಳ ಗ್ರಾಮ ಪಂಚಾಯತ್ ಸಿಬ್ಬಂದಿ ರಾತ್ರಿ 8 ಘಂಟೆಯಾದರೂ ಧ್ವಜವನ್ನು ಇಳಿಸದೇ ರಾಷ್ಟ್ರದ್ವಜಕ್ಕೆ  ಅವಮಾನ ಮಾಡಿದ್ದಾರೆ. ಹೀಗಾಗಿ ಶಿರೋಳ ಗ್ರಾಮಸ್ಥರು, ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಹಾಗೂ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

 ತಪ್ಪಿತಸ್ಥ ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗೆ ಸರಿಯಾದ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು. ನಂತರ ಈ ರೀತಿಯ ಘಟನೆ ಮರುಕಳಿಸುವುದಿಲ್ಲ ಎಂದು ಪಿ. ಡಿ. ಓ ಮನವಿ ಮಾಡಿದಾಗ ಪ್ರತಿಭಟನೆ ನಿಲ್ಲಿಸಿದ್ದಾರೆ. ಸರ್ಕಾರಿ ಕಛೇರಿಯ ಸಿಬ್ಬಂದಿಯೇ ಈ ರೀತಿ ಮಾಡಿದರೇ ಹೇಗೆ ಎಂದು ಸಾರ್ವಜನಿಕರು ಪ್ರಶ್ನಿಸಿದರು.




Share this Story:

Follow Webdunia kannada

ಮುಂದಿನ ಸುದ್ದಿ

ರಮ್ಯಾ ವಿರುದ್ಧ ಬಿಜೆಪಿ ಕಾರ್ಯಕರ್ತನ ಚಳವಳಿ