Daily Horoscope

Select Your Language

Notifications

webdunia
webdunia
webdunia
webdunia

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ
ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಂದ ಪ್ರತಿಭಟನೆ ನಡೆಸಲಾಗಿದೆ. 400 ರಾಂಕ್ ವಿದ್ಯಾರ್ಥಿಗಳಲ್ಲಿ ಮೊದಲ ಆದ್ಯತೆ ಬಿಸಿಯು ಯನಿವರ್ಸಿಟಿಯ ವಿದ್ಯಾರ್ಥಿಗಳಿಗೆ ನೀಡಲಾಗಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆದಿದೆ. ಎಂಎಸ್​ಸಿ, ಕೆಮೆಸ್ರ್ಟಿ, ಅಪ್ಲೀಕೇಷನ್​ಗಾಗಿ ವಿದ್ಯಾರ್ಥಿಗಳು ಕಾದು ಕುಳಿತಿದ್ದಾರೆ. ಕಾಲೇಜು ಆಡಳಿತ ಮಂಡಳಿ ಮತ್ತು ವಿದ್ಯಾರ್ಥಿಗಳಿ ವಾಗ್ವಾದ ಉಂಟಾಗಿದೆ. ರಾಂಕ್ ಲಿಸ್ಟ್ ಪ್ರಕಾರ ಸೀಟ್ ಅಲಾಟ್ ಆಗಲಿ ಎಂದು ವಿದ್ಯಾರ್ಥಿಗಳಿಂದ ಪ್ರತಿಭಟನೆ ವ್ಯಕ್ತವಾಗಿ: ಬೆಂಗಳೂರು ವಿವಿ ತ್ರಿಭಜನೆ ಆಪತ್ತು ತಂದಿದೆ ಎಂದು ಹೇಳಲಾಗುತ್ತಿದೆ. ಬಿಎಸ್​ಸಿ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಬಿಎಸ್​ಸಿ ಬಳಿಕ ಎಮ್​ಎಸ್​ಸಿ ವ್ಯಾಸಾಂಗ ಮಾಡಲು ಕಾಲೇಜುಗಳೇ ಇಲ್ಲದಂತಾಗಿದೆ. ಬೆಂಗಳೂರು ಉತ್ತರ ವಿವಿಯಲ್ಲಿ ವ್ಯಾಸಾಂಗ ಮಾಡಿದ್ದ ವಿದ್ಯಾರ್ಥಿಗಳಿಗೆ, ಬೆಂಗಳೂರು ಉತ್ತರ ವಿವಿಯಲ್ಲಿ ಎಮ್​ಎಸ್​ಸಿ ರಸಾಯನಶಾಸ್ತ್ರದಲ್ಲಿ ಯಾವುದೇ ಕಾಲೇಜುಗಳು ಇಲ್ಲ. ಹೀಗಾಗಿ ಬೆಂಗಳೂರು ಕೇಂದ್ರ ವಿವಿಗೆ ವಿದ್ಯಾರ್ಥಿಗಳು ಆಗಮಿಸಿದ್ದಾರೆ.
 
ಮೊದಲು ಎಲ್ಲಾ ವಿದ್ಯಾರ್ಥಿಗಳಿಗೂ ಅಪ್ಲಿಕೇಷನ್ ಕೊಟ್ಟಿದ್ದ ಬೆಂಗಳೂರು ಸೆಂಟ್ರಲ್ ವಿವಿ, ಇಂದು ಮೊದಲನೇ ದಿನದ ಕೌನ್ಸಿಲಿಂಗ್​ಗೆ ವಿದ್ಯಾರ್ಥಿಗಳನ್ನು ಬರೋಕೆ ಹೇಳಿತ್ತು. ಆದರೆ ಮೊದಲು ನಮ್ಮ ವಿದ್ಯಾರ್ಥಿಗಳಿಗೆ ಪ್ರಾಮುಖ್ಯತೆ ಎಂದು ಬೆಂಗಳೂರು ಸೆಂಟ್ರಲ್ ವಿವಿ ಹೇಳುತ್ತಿದೆ. ಬೆಂಗಳೂರು ಉತ್ತರ ವಿವಿಯಲ್ಲಿ ಸುಮಾರು 400 ವಿದ್ಯಾರ್ಥಿಗಳು ಬಿಎಸ್​ಸಿ ವ್ಯಾಸಾಂಗ ಮಾಡಿದ್ದರು. ಈಗ ಆ ವಿದ್ಯಾರ್ಥಿಗಳು ದಿಕ್ಕು ತೋಚದೆ ಕಂಗಾಲಾಗಿದ್ದಾರೆ. ಬೆಂಗಳೂರು ಕೇಂದ್ರ ವಿವಿ ಮುಂದೆ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೂಸ್ಟರ್ ಬಗ್ಗೆ ಕೇಂದ್ರ ಮಟ್ಟದಲ್ಲಿ ಚರ್ಚೆ