Select Your Language

Notifications

webdunia
webdunia
webdunia
webdunia

ಗೋಕಳ್ಳರು ಎಸ್ಕೇಪ್- ಗೋವುಗಳ ರಕ್ಷಣೆ

Protection of goose escape
bangalore , ಬುಧವಾರ, 13 ಏಪ್ರಿಲ್ 2022 (19:35 IST)
ಕಾರ್ಕಳ ಭಾಗದಲ್ಲಿ ಸಕ್ರಿಯವಾಗಿದ್ದ ಗೋಕಳ್ಳರ ತಂಡವನ್ನು ಬೆನ್ನಟ್ಟಿದ ಪೊಲೀಸರು ಗೋ ಸಾಗಾಟ ಮಾಡುತ್ತಿದ್ದ ವಾಹನ ಸೇರಿ 14 ಗೋವುಗಳು ವಶಕ್ಕೆ ಪಡೆದಿದ್ದಾರೆ. ಹೆಬ್ರಿ ಇನ್ಸ್​​​​ಪೆಕ್ಟರ್ ಸುದರ್ಶನ್ ದೊಡ್ಡಮನೆ ನೇತೃತ್ವದಲ್ಲಿ ಭಾರೀ ಕಾರ್ಯಾಚರಣೆ ನಡೆಸಿದ್ದು, ಗೋ ಸಾಗಾಟಗಾರರನ್ನು ಸಿನಿಮೀಯ ರೀತಿಯಲ್ಲಿ  ಪೊಲೀಸರು ಬೆನ್ನಟ್ಟಿದ್ರು. ಈ ವೇಳೆ ಗೋಕಳ್ಳರ ವಾಹನ ಅಂಗಡಿಯೊಂದಕ್ಕೆ ಡಿಕ್ಕಿಯಾದ ಹಿನ್ನೆಲೆ ವಾಹನವನ್ನು ಸ್ಥಳದಲ್ಲೇ ಬಿಟ್ಟು ಗೋಕಳ್ಳರು ಪರಾರಿಯಾಗಿದ್ದಾರೆ. ಪರಾರಿಯಾದ ಗೋಕಳ್ಳರು ಮಂಗಳೂರು ಮೂಲದವರಾಗಿರುವ ಸಾಧ್ಯತೆ ಇದೆ ಎಂದು ಶಂಕೆ ವ್ಯಕ್ತವಾಗಿದೆ. ಹಿಂಸಾತ್ಮಕ ರೀತಿಯಲ್ಲಿ ಕೈಕಾಲು ಮುರಿದು  ಜಾನುವಾರುಗಳನ್ನು ಕಳ್ಳರು ಸಾಗಾಟ ಮಾಡುತ್ತಿದ್ರು. ಸದ್ಯ ರಕ್ಷಿಸಲ್ಪಟ್ಟ ಗೋವುಗಳಲ್ಲಿ ಒಂದು ಜಾನುವಾರು ಸಾವನ್ನಪ್ಪಿದ್ರೆ, ಗಂಭೀರ ಸ್ಥಿತಿಯಲ್ಲಿರುವ ಗೋವುಗಳಿಗೆ ಪಶುವೈದ್ಯರಿಂದ ಚಿಕಿತ್ಸೆ ನೀಡಲಾಗ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಈಶ್ವರಪ್ಪ ಸೇರಿ ಮೂವರ ವಿರುದ್ಧ FIR