Select Your Language

Notifications

webdunia
webdunia
webdunia
webdunia

ಲಾರಿಯಲ್ಲಿ ಅಕ್ರಮ ಗೋಸಾಗಾಟ ಪತ್ತೆ: ಆರೋಪಿಗಳು ಪರಾರಿ; 24 ಗೋವುಗಳ ರಕ್ಷಣೆ

ಲಾರಿಯಲ್ಲಿ ಅಕ್ರಮ ಗೋಸಾಗಾಟ ಪತ್ತೆ: ಆರೋಪಿಗಳು ಪರಾರಿ; 24 ಗೋವುಗಳ ರಕ್ಷಣೆ
bangalore , ಮಂಗಳವಾರ, 25 ಜನವರಿ 2022 (20:21 IST)
ಮಡಿಕೇರಿ ತಾಲ್ಲೂಕಿನ  ಸಂಪಾಜೆ ಅರಣ್ಯ ತಪಾಸಣಾ  ಗೇಟ್ ಬಳಿ ನಿನ್ನೆ  ರಾತ್ರಿ  KA- 05-  AA -8605 ನೋಂದಣಿ ಸಂಖ್ಯೆಯ ಐಶರ್ ಲಾರಿಯಲ್ಲಿ ಯಾರಿಗೂ ಸಂಶಯ ಬಾರದ ರೀತಿಯಲ್ಲಿ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದಾಗ ಪತ್ತೆ ಹಚ್ಚಿದ ಇಲಾಖಾ ಅಧಿಕಾರಿಗಳು ಲಾರಿ ಸಮೇತ 24 ಗೋವುಗಳನ್ನು ವಶಕ್ಕೆ ಪಡೆದಿದ್ದಾರೆ.
ಇಲಾಖಾ ಸಿಬ್ಬಂದಿಗಳು ತಪಾಸಣೆಗೆ ಮುಂದಾಗುತ್ತಿದ್ದಂತೆ ಲಾರಿಯಲ್ಲಿದ್ದ ಆರೋಪಿಗಳು ಲಾರಿಯಿಂದ ಜಿಗಿದು ಓಡಿ ಕತ್ತಲ್ಲಲ್ಲಿ ಪರಾರಿಯಾಗಿರುತ್ತಾರೆ.
ಒಂದಷ್ಟು ದೂರ ಸಿಬ್ಬಂದಿಗಳು ಬೆನ್ನಟ್ಟಿದರಾದರೂ ಕತ್ತಲು ಆವರಿಸಿದ್ದ ಕಾರಣ ಆರೋಪಿಗಳು ಪರಾರಿಯಾದರು.
 ಆರೋಪಿಗಳು ಗೋವುಗಳನ್ನು ತುಂಬಿಕೊಂಡು ಮಡಿಕೇರಿ ಮಾರ್ಗದಿಂದ ಸುಳ್ಯ ಕಡೆಗೆ ತೆರಳುತ್ತಿದ್ದು ಸಂಪಾಜೆ ಗೇಟ್ ಬಳಿ ತಪಾಸಣೆ ವೇಳೆಗೆ ಅಕ್ರಮ ಗೋ ಸಾಗಾಟ ಬೆಳಕಿಗೆ ಬಂದಿದೆ. ನಾಲ್ಕು ತಿಂಗಳ ಹಿಂದೆಯೂ ಸಹ ತಡರಾತ್ರಿ ಮದೆನಾಡು ಬಳಿ ಲಾರಿಯೊಂದು ಅಪಘಾತಕ್ಕೀಡಾದಾಗ  ಅದರಲ್ಲಿ 25 ಕ್ಕೂ ಹೆಚ್ಚು ಗೋವುಗಳಿದ್ದು ಆರೋಪಿಗಳು ಕೂಡಲೇ ಗೋವುಗಳನ್ನು ಕೆಳಗಿಳಿಸಿ ತಪ್ಪಿಸಿಕೊಂಡಿದ್ದರು. ಸ್ಥಳೀಯರು ಸುತ್ತಮುತ್ತಲಲ್ಲಿದ್ದ ಆ ಗೋವುಗಳನ್ನು     ಕೊಂಡೊಯ್ದಿದ್ದರು. 
ಸಂಪಾಜೆ ಚೆಕ್ ಪೋಸ್ಟ್ ಮೂಲಕ ನಿರಂತರವಾಗಿ ಕೇರಳ ಮತ್ತು ಮಂಗಳೂರಿನ ಕಸಾಯಿಖಾನೆಗಳಿಗೆ  ಸಿಬ್ಬಂದಿಗಳ ಸಹಕಾರದಿಂದಲೇ ಅಕ್ರಮವಾಗಿ ಗೋಸಾಗಾಟವಾಗುತ್ತಿರುವ ಬಗ್ಗೆ ಹಿಂದು ಜಾಗರಣ ವೇದಿಕೆಯು ಹಲವು ಬಾರಿ ಪೋಲೀಸ್ ಇಲಾಖೆಗೆ ಮಾಹಿತಿ ನೀಡಿತ್ತು.
 ಇದೀಗ ಪತ್ತೆಯಾದ ಅಕ್ರಮ ಗೋಸಾಗಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಡಿಕೇರಿ ಗ್ರಾಮಾಂತರ ಪೋಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಶಸ್ತ್ರ ಮೀಸಲು ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ನೇಮಕಾತಿ