Select Your Language

Notifications

webdunia
webdunia
webdunia
webdunia

ಕೋಲ್ಡ್ ಡ್ರಿಂಕ್ಸ್ ಮಾರೋಕೆ ಹೋಗಿ ಹಳ್ಳದಲ್ಲಿ ಸಿಲುಕಿ ಬಚಾವಾದ್ರು!

ಕೋಲ್ಡ್ ಡ್ರಿಂಕ್ಸ್ ಮಾರೋಕೆ ಹೋಗಿ ಹಳ್ಳದಲ್ಲಿ ಸಿಲುಕಿ ಬಚಾವಾದ್ರು!
ದಾವಣಗೆರೆ , ಬುಧವಾರ, 23 ಅಕ್ಟೋಬರ್ 2019 (14:08 IST)
ಭಾರೀ ಮಳೆಯಿಂದಾಗಿ ತುಂಬಿದ್ದ ಹಳ್ಳದ ಪ್ರವಾಹದಲ್ಲಿ‌ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನ ರಕ್ಷಿಸಲಾಗಿದೆ.

ವಾಹನ ಸಹಿತ ಹಳ್ಳದಲ್ಲಿ ಸಿಲುಕಿದ್ದ ಇಬ್ಬರನ್ನು ರಕ್ಷಿಸಿದ್ದಾರೆ ಗ್ರಾಮಸ್ಥರು. ದಾವಣಗೆರೆ ತಾಲೂಕಿನ ಅರಸಾಪುರ ಗ್ರಾಮದ ಬಳಿಯ ಹಳ್ಳದಲ್ಲಿ ಘಟನೆ ನಡೆದಿದೆ.

ಅರಸಾಪುರ ಹಾಗೂ ಆವರಗೊಳ್ಳ ಗ್ರಾಮದ ನಡುವಿನ ಹಳ್ಳ ಮೈದುಂಬಿ ಹರಿಯುತ್ತಿದೆ. ಆದರೆ ನೀರನ್ನು ಲೆಕ್ಕಿಸದೇ ಹಳ್ಳಿಗಳಿಗೆ ಕೋಲ್ಡಡ್ರಿಂಕ್ಸ್  ಪೂರೈಕೆ ಮಾಡುತ್ತಿದ್ದ ಮಜಡಾ ವಾಹನ ಹಳ್ಳದಲ್ಲಿ ಸಿಲುಕಿದೆ. ವಾಹನದಲ್ಲಿ ಕುಳಿತು ಹಳ್ಳದಲ್ಲಿ ಸಿಲುಕಿ ಪರದಾಡುತ್ತಿದ್ದವರನ್ನು ಗಮನಿಸಿದ್ದಾರೆ ಗ್ರಾಮಸ್ಥರು.

ಟ್ಯಾಕ್ಟರ್ ತಂದು  ಹಗ್ಗ ಬಳಸಿ ಹಳ್ಳದಿಂದ  ಇಬ್ಬರ ರಕ್ಷಣೆ ಮಾಡಲಾಯಿತು.  




Share this Story:

Follow Webdunia kannada

ಮುಂದಿನ ಸುದ್ದಿ

ಪ್ರಖ್ಯಾತ ಮಠದ ಸ್ವಾಮೀಜಿಗೆ ಕಳ್ಳ, ಸುಳ್ಳ ಸ್ವಾಮೀಜಿ ಎಂದ ಶಿವಯೋಗಿ ಸ್ವಾಮೀಜಿ