Publish Date: Sat, 09 Jul 2022 (19:25 IST)
Updated Date: Sat, 09 Jul 2022 (19:29 IST)
ದ್ವಿತೀಯ ಪಿಯುಸಿ ಪರೀಕ್ಷಾ ಉತ್ತರ ಪತ್ರಿಕೆಗಳ ಸ್ಕ್ಯಾನ್ ಪ್ರತಿಗಳನ್ನು ಡೌನ್ಲೋಡ್ ಮಾಡಿಕೊಳ್ಳಲು ಕಳೆದ ಎರಡು ದಿನಗಳಿಂದ ಸಮಸ್ಯೆಯಾದ ಹಿನ್ನೆಲೆಯಲ್ಲಿ ಪ್ರತಿಗಳ ಡೌನ್ಲೋಡ್ಗೆ ಜು.15ರವರೆಗೆ ಹಾಗೂ ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸಲು ಜು.18ರವರೆಗೆ ಪಿಯು ಇಲಾಖೆ ಕಾಲಾವಕಾಶ ವಿಸ್ತರಿಸಿದೆ. ಸ್ಕ್ಯಾನ್ ಪ್ರತಿಗೆ ಅರ್ಜಿ ಸಲ್ಲಿಸಿದ್ದವರು ಜು.6ರಿಂದ ಇಲಾಖೆಯ ವೆಬ್ಸೈಟ್ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದೆಂದು ತಿಳಿಸಲಾಗಿತ್ತಾದರೂ ತಾಂತ್ರಿಕ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಶುಕ್ರವಾರ ಸಮಸ್ಯೆ ಸರಿಪಡಿಸಿದ ಇಲಾಖೆಯು ಪ್ರತಿಗಳ ಡೌನ್ಲೋಡ್ಗೆ ಜು.10ರವರೆಗೆ ಇದ್ದ ಸಮಯವನ್ನು 15ರವರೆಗೆ ವಿಸ್ತರಿಸಿದೆ.