Select Your Language

Notifications

webdunia
webdunia
webdunia
webdunia

ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ!

second puc result karnataka ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ
bengaluru , ಶುಕ್ರವಾರ, 17 ಜೂನ್ 2022 (16:03 IST)
ನಾಳೆ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಲಿದ್ದು, ಈ ಹಿಂದೆ ಎಸ್ಸೆಸ್ಸೆಲ್ಸಿ ಫಲಿತಾಂಶದ ಮಾದರಿಯಲ್ಲಿ ಮೊಬೈಲ್‌ ನಲ್ಲೇ ಫಲಿತಾಂಶ ದೊರೆಯಲಿದೆ.
ಏಪ್ರಿಲ್‌ 22 ರಿಂದ ಮೇ 18ರವರೆಗೆ ನಡೆದಿದ್ದ ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ವಿದ್ಯಾರ್ಥಿಗಳ ಮೊಬೈಲ್ ಗೆ ನೇರವಾಗಿ ಮೆಸೇಜ್ ಮೂಲಕ ರವಾನೆ ಆಗಲಿದೆ.
ಶನಿವಾರ ಬೆಳಗ್ಗೆ 11 ಗಂಟೆಗೆ ಪಿಯುಸಿ ಬೋಡ್೯ನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಫಲಿತಾಂಶ ಘೋಷಣೆ ಮಾಡಲಿದ್ದಾರೆ.
ಟ್ವೀಟ್ ಮೂಲಕ ಶಿಕ್ಷಣ ಸಚಿವ ಬಿಸಿ ನಾಗೇಶ್ ಈ ಮಾಹಿತಿ ನೀಡಿದ್ದು, 6,84,255 ವಿದ್ಯಾರ್ಥಿಗಳ  ಭವಿಷ್ಯ ನಾಳೆ ನಿರ್ಧಾರವಾಗಲಿದೆ. ಈ ಪೈಕಿ 3,46,936 ಬಾಲಕರು ಹಾಗೂ 3,37,319 ಬಾಲಕಿಯರು ಪರೀಕ್ಷೆಗೆ ಹಾಜರಾಗಿದ್ದರು.
6,00,519 ರೆಗ್ಯುಲರ್ ವಿದ್ಯಾರ್ಥಿಗಳು, 61,808 ಪುನರಾವರ್ತಿತ ಅಭ್ಯರ್ಥಿಗಳು, 21,928 ಖಾಸಗಿ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದು, ರಾಜ್ಯಾದ್ಯಂತ ಒಟ್ಟು 1,076 ಕೇಂದ್ರಗಳಲ್ಲಿ ಪರೀಕ್ಷೆ  ನಡೆದಿತ್ತು.
ಕಲಾ ವಿಭಾಗದಲ್ಲಿ 2,28,167, ವಾಣಿಜ್ಯ ವಿಭಾಗದಲ್ಲಿ 2,45,519 ಹಾಗೂ ವಿಜ್ಞಾನ ವಿಭಾಗದಲ್ಲಿ  2,10,569  ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಿಎಂ ಸಹೋದರನ ಮನೆ ಮೇಲೆ ಸಿಬಿಐ ದಾಳಿ?