Select Your Language

Notifications

webdunia
webdunia
webdunia
webdunia

ಎಸಿಬಿ ದಾಳಿ: ಗ್ರಾಪಂ ಕಾರ್ಯದರ್ಶಿ ಬಲೆಗೆ

ACB attack
gadaga , ಶುಕ್ರವಾರ, 17 ಜೂನ್ 2022 (14:41 IST)
ಗ್ರಾಮ ಪಂಚಾಯತಿ ಗ್ರೇಟ್ 2 ಸೆಕ್ರೆಟರಿ ಮನೆ ಮೇಲೆ ಎಸಿಬಿ ದಾಳಿ ನಡೆಸಿದ್ದಾರೆ. ಪ್ರದೀಪ್ ಆಲೂರು ಎನ್ನುವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದ್ದು, 
ಅಸುಂಡಿ ಪಂಚಾಯ್ತಿಯಲ್ಲಿ ಗ್ರೆಡ್ 2 ಸೆಕ್ರೆಟರಿ ಆಗಿ ಪ್ರದೀಪ್ ಆಲೂರು ಕಾರ್ಯನಿರ್ವಹಿಸುತ್ತಿದ್ದಾರೆ.
ಹುಲಕೋಟಿ ಹಾಗೂ ಬೆಂತೂರು ಗ್ರಾಮದಲ್ಲಿರುವ ಮನೆ ಸೇರಿದಂತೆ ಅಸುಂಡಿಯ ಕಚೇರಿ ಮೇಲೆಯೂ ದಾಳಿ ನಡೆದಿದೆ.
ಅಕ್ರಮ ಆಸ್ತಿ ಸಂಪಾದನೆ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದು, ಅಧಿಕಾರಿಗಳು ಕಡತ ಪರಿಶೀಲನೆ ನಡೆಸಿದರು. ಪ್ರದೀಪ್ ಸಂಬಂಧಿಕರ ಧಾರವಾಡದ ಮನೆಯಲ್ಲಿಯೂ ಎಸಿಬಿ ಶೋಧ ನಡೆಸಿದರು.
ಎಸಿಬಿ ಡಿವೈಎಸ್ ಪಿ ಎಮ್. ವಿ. ಮಲ್ಲಾಪುರ ನೇತೃತ್ವದಲ್ಲಿ ದಾಳಿ ನಡೆದಿದ್ದು, 
ಅಧಿಕಾರಿ ಹೆಸರಲ್ಲಿದ್ದ ಅರ್ಧ ಕೆಜಿ ಚಿನ್ನ, ಅಪಾರ ಪ್ರಮಾಣದ ಆಸ್ತಿ ವಶಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಪ್ರದೀಪ್ ಸಹೋದರರ ಹೆಸರಲ್ಲಿ 25 ಎಕರೆ ಜಮೀನು, 6 ಸೈಟ್ ಇದೆ ಎಂದು ತಿಳಿದುಬಂದಿದೆ.
ಹುಲಕೋಟೆ ಮನೆಯಲ್ಲಿ 90 ಗ್ರಾಂ ಚಿನ್ನ ಪತ್ತೆಯಾಗಿದೆ.
ಧಾರವಾಡದ ಹೆಬ್ಬಳ್ಳಿಯ ಪ್ರದೀಪ್ ಸಹೋದರನ ಮನೆಯಲ್ಲಿ 500 ಗ್ರಾಂ ಚಿನ್ನ ದೊರೆತಿದೆ ಎಂದು ಹೇಳಲಾಗಿದೆ. ಗದಗ ಹಾಗೂ ಯಾದಗಿರಿಯ ಎಸಿಬಿ ಅಧಿಕಾರಿಗಳಿಂದ ದಾಳಿ ನಡೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಚಾಮರಾಜನಗರ: ಲಾರಿ ತಡೆಗಟ್ಟಿ ಕಬ್ಬು ಸವಿದ ಮರಿ ಆನೆ!