Select Your Language

Notifications

webdunia
webdunia
webdunia
webdunia

ಎಸಿಬಿ ದಾಳಿ;ಕಂತೆ ಕಂತೆ ಹಣ, ಒಬ್ಬರಿಗಿಂತ ಒಬ್ಬರು ಭ್ರಷ್ಟರು

ACB attacks
bangalore , ಮಂಗಳವಾರ, 22 ಮಾರ್ಚ್ 2022 (19:30 IST)
ಒಬ್ಬರಿಗಿಂತ ಒಬ್ಬರು ಭ್ರಷ್ಟರು. ಇವರ ಆಸ್ತಿ ನೋಡಿದ್ರೆ ಕುಬೇರನೆ ಶಾಕ್ ಆಗುತ್ತಾನೆ. ಯಾವ ಅರಮನೆಗೂ ಕಮ್ಮಿ ಇಲ್ಲ ಇವರ ಮನೆಗಳು. ಐಷಾರಾಮಿ ಜೀವನ ನೋಡಿ ಎಸಿಬಿ ಅಧಿಕಾರಿಗಳೇ ಶಾಕ್ ಆಗಿದ್ದಾರೆ. ನಗರದಲ್ಲಿಂದು ಬೆಳ್ಳಂಬೆಳಗ್ಗೆ ಬಿಡಿಎ ಮಧ್ಯವರ್ತಿಗಳು, ಏಜೆಂಟ್‌ಗಳ ಮನೆ ಮೇಲೆ ಎಸಿಬಿ ದಾಳಿ (ACB Raid) ಮಾಡಿದೆ. ಬಿಡಿಎ ಅಧಿಕಾರಿಗಳ ಜತೆ ಸೇರಿಕೊಂಡು ಭ್ರಷ್ಟಾಚಾರ, ಅವ್ಯವಹಾರದಲ್ಲಿ ತೊಡಗಿದ ಆರೋಪ ಕೇಳಿಬಂದ ಹಿನ್ನೆಲೆ ಬೆಂಗಳೂರಿನಲ್ಲಿ ಏಕಕಾಲದಲ್ಲಿ ಎಸಿಬಿ SP ಉಮಾ ಪ್ರಶಾಂತ್ ನೇತೃತ್ವದಲ್ಲಿ 100ಕ್ಕೂ ಹೆಚ್ಚು ಎಸಿಬಿ ಅಧಿಕಾರಿಗಳಿಂದ, 9 ಕಡೆ ದಾಳಿ ಮಾಡಲಾಗಿದೆ.  ಬೆಂಗಳೂರಿನ ಆರ್.ಆರ್.ನಗರದಲ್ಲಿರುವ ಬಿಡಿಎ ಮಧ್ಯವರ್ತಿ ತೇಜಸ್ವಿ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು, ಕಂತೆ ಕಂತೆ ಹಣ ಪತ್ತೆಯಾಗಿದೆ. ಬೆಳ್ಳಿ ವಸ್ತುಗಳು, ಚಿನ್ನಾಭರಣ, ಬೆಳ್ಳಿ ಪಾತ್ರೆ, ನೂರು, ಐನೂರು ನೋಟ್​ ಸಿಕ್ಕಿವೆ. ಮುದ್ದಿನಪಾಳ್ಯದಲ್ಲಿರುವ ಬ್ರೋಕರ್ ಅಶ್ವತ್ಥ್ ಮನೆಲಿ ಐಷಾರಾಮಿ ಕಾರುಗಳು ಪತ್ತೆಯಾಗಿವೆ. ಇನ್ನೋವಾ, ಆಡಿ, ಬೆಂಜ್, ಲಕ್ಷ, ಕೋಟ್ಯಾಂತರ ಮೌಲ್ಯದ ಲಕ್ಸೂರಿ ಕಾರುಗಳನ್ನು ಅಧಿಕಾರಿಗಳು ಪರಿಶೀಲಿಸಿದ್ದಾರೆ.
 
ಆರ್.ಟಿ. ನಗರದಲ್ಲಿರುವ ಮೋಹನ್ ಮನೆಯಲ್ಲಿ ಬರೋಬ್ಬರಿ ಎರಡೂವರೆ ಕೋಟಿ ಮೌಲ್ಯದ 4.5 ಕೆಜಿ ಚಿನ್ನ ಪತ್ತೆಯಾಗಿದೆ. ಕಂತೆ ಕಂತೆ ಹಣ ಪತ್ತೆಯಾಗಿದ್ದು, ಅಪಾರ ಪ್ರಮಾಣದ ಬೆಳ್ಳಿ ತಟ್ಟೆ, ಲೋಟ, ಬಟ್ಟಲು, ದೀಪ,  ಚಿನ್ನದ ಸರ, ಚಿನ್ನದ ಓಲೆ, ಚಿನ್ನಡ ಡಾಬು ಸಿಕ್ಕಿದೆ. ಮಧ್ಯವರ್ತಿ ಮೋಹನ್​​ಗೆ ಸೇರಿದ ಲ್ಯಾಪ್​ಟಾಪ್,​ ಒಂದು ಬ್ಯಾಗ್​​ನಷ್ಟು ದಾಖಲೆಯನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದೊಮ್ಮಲೂರಿನ ಬ್ರೋಕರ್ ಮನೋಜ್ ಮನೆಯಲ್ಲಿ ಬೆಲೆ ಬಾಳುವ ವಸ್ತುಗಳು ಪತ್ತೆಯಾಗಿವೆ. ದೇಶ ಹಾಗೂ ವಿದೇಶಗಳ ಪ್ರತಿಷ್ಟಿತ ಬ್ರಾಂಡ್​ನ 19 ಸನ್ ಗ್ಲಾಸಸ್ ಹಾಗೂ 22 ಗಡಿಯಾರಗಳು ಪತ್ತೆಯಾಗಿದ್ದು, ಅಧಿಕಾರಿಗಳು ಇನ್ನೂ ಮನೆಯನ್ನು ಜಾಲಾಡುತ್ತಿದ್ದಾರೆ. ಇನ್ನೂ ಬ್ರೋಕರ್ ರಾಮ-ಲಕ್ಷ್ಮಣ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದು, ಮನೆ ಬಿಗ ತೆಗೆಸಿ ಶೋಧ ಮಾಡಲಾಗುತ್ತಿದೆ. 12 ಎಸಿಬಿ ಅಧಿಕಾರಿಗಳ ತಂಡದಿಂದ ದಾಖಲೆ ಪರಿಶೀಲನೆ ಮಾಡಲಾಗುತ್ತಿದೆ.
ಬಿಡಿಎ ಮಧ್ಯವರ್ತಿ ಮುನಿರತ್ನ ಮನೆಯಲ್ಲಿ ಎಸಿಬಿ ತಲಾಶ್ ನಡೆದಿದ್ದು, ಮುನಿರತ್ನ ಮನೆಗೆ ಪ್ರಿಂಟರ್ ಜತೆ ಅಧಿಕಾರಿಗಳ ಆಗಮನವಾಗಿದೆ. ವಶಕ್ಕೆ ಪಡೆದ ವಸ್ತುಗಳ ಮಹಜರು ನಡೆಸಲು ಬಿಬಿಎಂಪಿಯ ಓರ್ವ ಅಧಿಕಾರಿಯನ್ನು ಎಸಿಬಿ ಕರೆಸಿದ್ದಾರೆ. ಬಿಡಿಎ ಮಧ್ಯವರ್ತಿ ಚಿಕ್ಕಹನುಮಯ್ಯನ ಎರಡು ಅಂತಸ್ತಿನ ಮನೆ ಮೇಲೆ ಕೂಡ ದಾಳಿಯಾಗಿದ್ದು, ಮನೆ ಮುಂದೆ ನಿಲ್ಲಿಸಿರುವ ಕಾರುಗಳ ಪರಿಶೀಲನೆ ಮಾಡಲಾಗಿದೆ. ಪೆಟ್ರೋಲ್ ಬಂಕ್​ನ್ನು ಸಹ ಹೊಂದಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಭಗವಂತ್ ಮಾನ್ ಸಂಪುಟ 7 ಸಚಿವರ ಮೇಲೆ ಕ್ರಿಮಿನಲ್ ಮೊಕದ್ದಮೆ, 9 ಮಂದಿ ಕೋಟ್ಯಧೀಶರು