Publish Date: Sat, 08 Apr 2023 (13:36 IST)
Updated Date: Sat, 08 Apr 2023 (13:45 IST)
ನಂದಿನಿಯನ್ನ ಮುಗಿಸೋದಕ್ಕೆ ಸರ್ಕಾರ ಹೊರಟಿದೆ ಎಂದು ಕನ್ನಡಪರ ಸಂಘಟನೆಗಳು ಕಿಡಿಕಾರಿದೆ.ಅಲ್ಲದೆ ಸರ್ಕಾರದ ತೀರ್ಮಾನವನ್ನ ಕನ್ನಡ ರಕ್ಷಣಾ ವೇದಿಕೆ ವಿರೋಧಿಸುತ್ತೆ.ಹೈನುಗಾರಿಕೆ ಉತ್ತೇಜನ ಕೊಡೋದು ಬಿಟ್ಟು ಈ ರೀತಿಯ ಹುನ್ನಾರ ಮಾಡಲಾಗ್ತಿದೆ.ಈಗ ಹೈನುಗಾರಿಕೆ ಮಾಡಲು ಜನರು ಮುಂದೆ ಬರ್ತಿಲ್ಲ.ಇದಕ್ಕೆ ಕಾರಣ ನಮ್ಮ ಸರ್ಕಾರ ಹೈನುಗಾರಿಕೆ ಬಗ್ಗೆ ನಿರ್ಲಕ್ಷ್ಯ ವಹಿಸಿರೋದು.ಕನ್ನಡಿಗರು ಕಟ್ಟಿ, ಬೆಳಸಿರುವ ನಂದಿನಿಯನ್ನು ಹಾಳು ಮಾಡಲು ಹೊರಟ ಸರ್ಕಾರದ ವಿರುದ್ಧ ನಾವು ಹೋರಾಟ ಮಾಡ್ತಿವಿ ಎಂದು ಕರವೇ ಪ್ರವೀಣ್ ಶೆಟ್ಟಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.