ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡರು ಮುಸ್ಲಿಮರಾಗಿ ಹುಟ್ಟಬೇಕು ಎಂದಿದ್ರಪ್ಪಾ ಎಂದು ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯ ಮಾಡಿದ್ದಾರೆ.
ರಾಜ್ಯದಲ್ಲಿ ಘಜ್ನಿ, ಘೋರಿ ಆಡಳಿತ ನಡೆಸುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಹೇಳಿಕೆಗೆ ಇಂದು ಪ್ರಿಯಾಂಕ್ ಖರ್ಗೆ ಕೌಂಟರ್ ಕೊಟ್ಟಿದ್ದಾರೆ. ಅವರ ತಂದೆಯರು ಈ ಹಿಂದೆ ಒಂದು ಹೇಳಿಕೆ ಕೊಟ್ಟಿದ್ದರು. ಮುಂದಿನ ಜನ್ಮದಲ್ಲಿ ಈ ಸಮಾಜದಲ್ಲಿ ಹುಟ್ಟುತ್ತೇನೆ ಎಂದು. ಸ್ವಲ್ಪ ನೆನಪು ಮಾಡಿಸಿ ಅವರಿಗೆ ಎಂದು ವ್ಯಂಗ್ಯ ಮಾಡಿದ್ದಾರೆ.
ಇಡೀ ಜಗತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಬಗ್ಗೆ ಮಾತನಾಡುತ್ತಿದ್ದರೆ ಇವರು ಘಜ್ನಿ, ಘೋರಿ, ಔರಂಗಜೇಬ್ ಎಂದು ಹಳೇಕಾಲದ ಮಾತನಾಡುತ್ತಿದ್ದಾರೆ. ಇದಕ್ಕಾ ಇವರಿಗೆ ಜನ ಮತ ಹಾಕಿ ಗೆಲ್ಲಿಸಿರೋದು. ಅಭಿವೃದ್ಧಿ ಬಗ್ಗೆ ಮಾತನಾಡಿ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಯತ್ನಾಳ್ ಕಾಂಗ್ರೆಸ್ ಸೇರಲ್ಲ ಎಂದ ಹೇಳಿಕೆಗೂ ಪ್ರತಿಕ್ರಿಯಿಸಿದ ಅವರು ನಾವು ಯಾರನ್ನೂ ಆಹ್ವಾನ ನೀಡಿಲ್ಲ. ಅವರ ಸಿದ್ಧಾಂತಗಳು ಬದಲಾದರೆ ಬರಲಿ. ಅಲ್ಲ, ಅಂತಹ ಕೋಮು ಧ್ವೇಷದ ಬೀಜ ಬಿತ್ತುವವರು ನಮ್ಮ ಪಕ್ಷಕ್ಕೆ ಬರುವುದೇ ಬೇಡ ಎಂದಿದ್ದಾರೆ.