Publish Date: Fri, 15 May 2026 (15:10 IST)
Updated Date: Fri, 15 May 2026 (15:12 IST)
ಬೆಂಗಳೂರು: ಪ್ರಧಾನಿ ಮೋದಿ ವಿದೇಶ ಪ್ರವಾಸದಿಂದ ಏನು ಲಾಭ ಎಂದು ಕರ್ನಾಟಕದ ಸಚಿವ ಪ್ರಿಯಾಂಕ್ ಖರ್ಗೆ ಕಿಡಿ ಕಾರಿದ್ದಾರೆ.
ದೇಶದಲ್ಲಿ ಇಂಧನ ಬೆಲೆ ಏರಿಕೆಯಿದೆ. ಈ ನಡುವೆ ಪ್ರಧಾನಿ ಮೋದಿ ದುಬೈ ಪ್ರವಾಸ ಮಾಡಿದ್ದಾರೆ. ಈ ಬಗ್ಗೆ ಪ್ರಿಯಾಂಕ್ ಖರ್ಗೆ ಮಾಧ್ಯಮಗಳ ಮುಂದೆ ವಾಗ್ದಾಳಿ ನಡೆಸಿದ್ದಾರೆ.
ಚುನಾವಣೆ ನಡೆಯುತ್ತಿದ್ದಾಗ ಸುಮ್ಮನಿದ್ದರು. ಚುನಾವಣೆ ಆದ ತಕ್ಷಣ ಮೋದಿಯವರು ವಿದೇಶಕ್ಕೆ ಹೋಗ್ತಾರೆ. ಬೆಲೆ ಏರಿಕೆ ಆಗುತ್ತದೆ, ಹಾಗೇ ಆಗಿರೋದಲ್ವಾ? ನನಗೆ ಒಂದು ಅರ್ಥ ಆಗಲ್ಲ 800 ಕೋಟಿ ರೂ.ಗಿಂತ ಹೆಚ್ಚು ಖರ್ಚು ಮಾಡಿ ಮೋದಿ ವಿದೇಶ ಪ್ರವಾಸ ಮಾಡಿ ದೇಶಕ್ಕೆ ಲಾಭ ಆಗಿದ್ದೇನು? ಎಲ್ಲರೂ ಇವರ ಫ್ರೆಂಡ್ ಅಂತಾರೆ. ಆದರೆ ಇವರ ಫ್ರೆಂಡ್ ಶಿಪ್ ನಿಂದ ದೇಶಕ್ಕೆ ಆಗಿರುವ ಲಾಭ ಏನು? ಬರೀ ಚುನಾವಣೆ ಮಾಡೋದು ಮಾತ್ರನ? ಎಲ್ಲೆಲ್ಲಿ ಬಿಜೆಪಿ ಇಲ್ಲದ ರಾಜ್ಯ ಸರ್ಕಾರ ಉರುಳಿಸೋದು, ಐಟಿ, ಇಡಿ ಛೂ ಬಿಡೋದು, ಎಸ್ಐಆರ್ ಮಾಡೋದು ಅಷ್ಟೇ ಇವರ ಜವಾಬ್ಧಾರಿನಾ? ಧೈರ್ಯ ಇದ್ದರೆ ಪಾರ್ಲಿಮೆಂಟ್ ಕರೆದು ಉತ್ತರ ಕೊಡಲಿ, ಪತ್ರಿಕಾಗೋಷ್ಠಿಯಲ್ಲಿ ಉತ್ತರ ಕೊಡಲಿ. 12 ವರ್ಷದಿಂದ ನಾವು ನೋಡ್ಕೊಂಡು ಬಂದಿದ್ದೇವೆ. ಜವಾಬ್ಧಾರಿ ಎಂದರೆ ಮೋದಿ ಓಡಿ ಹೋಗ್ತಾರೆ. ಅವರು ಅದಾನಿ, ಅಂಬಾನಿಗೆ ಲಾಭ ಆಗುವ ಕೆಲಸ ಮಾತ್ರ ಮಾಡ್ತಾರೆ. ಅವರ ಆಳುಮಕ್ಕಳಾಗಿದ್ದಾರೆ. ಅದಕ್ಕೆ ಪರಿಸ್ಥಿತಿ ಇಲ್ಲಿಗೆ ಬಂದು ನಿಂತಿದೆ ಎಂದು ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ