Select Your Language

Notifications

webdunia
webdunia
webdunia
webdunia

ಬಿಜೆಪಿ ನ್ಯಾಯವಾಗಿ ಚುನಾವಣೆ ಗೆಲ್ಲುತ್ತಿಲ್ಲ: ಪ್ರಿಯಾಂಕ್ ಖರ್ಗೆ

Priyank Kharge
ಬೆಂಗಳೂರು: ಬಿಜೆಪಿ ನ್ಯಾಯಯುತವಾಗಿ ಚುನಾವಣೆಗಳನ್ನು ಗೆಲ್ಲುತ್ತಿಲ್ಲ. ಅಧಿಕಾರ ಬಳಸಿ ಗೆಲ್ಲುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಪಂಚ ರಾಜ್ಯಗಳ ಚುನಾವಣೆ ಪೈಕಿ ಮೂರರಲ್ಲಿ ಗೆಲುವು ಸಾಧಿಸಿರುವ ಬಿಜೆಪಿ ಐತಿಹಾಸಿಕ ಗೆಲುವಿನ ಸಂಭ್ರಮದಲ್ಲಿದೆ. ಅದರಲ್ಲೂ ಪಶ್ಚಿಮ ಬಂಗಾಲದಲ್ಲಿ ಸಿಕ್ಕ ಗೆಲುವು ಬಿಜೆಪಿ ಉತ್ಸಾಹ ಹೆಚ್ಚಿಸಿದೆ. ಆದರೆ ಇದರ ಬೆನ್ನಲ್ಲೇ ಈಗ ಕಾಂಗ್ರೆಸ್ ನಾಯಕರು ವೋಟ್ ಚೋರಿ ಆರೋಪ ಮಾಡಿದ್ದಾರೆ.

ರಾಹುಲ್ ಗಾಂಧಿ ನಿನ್ನೆಯೇ ಪಶ್ಚಿಮ ಬಂಗಾಲ ಮತ್ತು ಅಸ್ಸಾಂನಲ್ಲಿ ವೋಟ್ ಚೋರಿಯಿಂದ ಬಿಜೆಪಿ ಗೆದ್ದಿದೆ ಎಂದು ಆಪಾದಿಸಿದ್ದರು. ಇದೀಗ ಕರ್ನಾಟಕ ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕೂಡಾ ಬಿಜೆಪಿ ತನ್ನ ಅಧಿಕಾರ ಬಳಸಿ ಗೆಲ್ಲುತ್ತಿದೆ ಎಂದಿದ್ದಾರೆ.

‘ಬಿಜೆಪಿಯದ್ದು ನಿಜವಾದ ಗೆಲುವಲ್ಲ. ಅವರು ಅಧಿಕಾರ ಬಳಸಿ ಗೆಲ್ಲುತ್ತಿದ್ದಾರೆ. ಅವರು ಸಂಸ್ಥೆಗಳನ್ನು ನಿಯಂತ್ರಿಸುವ ಮೂಲಕ, ಜನಾದೇಶವನ್ನು ಸೃಷ್ಟಿಸುವ ಮೂಲಕ ತಮಗೆ ಬೇಕಾದ ಫಲಿತಾಂಶ ಪಡೆಯುತ್ತಿದ್ದಾರೆ. ಇದಕ್ಕೆ ಪಶ್ಚಿಮ ಬಂಗಾಲ, ಮಧ್ಯಪ್ರದೇಶ, ಅಸ್ಸಾಂ, ಹರ್ಯಾಣ, ಮಹಾರಾಷ್ಟ್ರ, ಲೋಕಸಭೆ ಚುನಾವಣೆಗಳು ಸಾಕ್ಷಿ’ ಎಂದಿದ್ದಾರೆ.

ಆದರೆ ಪ್ರಿಯಾಂಕ್ ಈ ರೀತಿ ಸೋಷಿಯಲ್ ಮೀಡಿಯಾದಲ್ಲಿ ನೀಡಿರುವ ಹೇಳಿಕೆ ಟ್ರೋಲ್ ಗೊಳಗಾಗಿದೆ. ಈ ರೀತಿ ಗೂಬೆ ಕೂರಿಸುವುದನ್ನು ಬಿಟ್ಟು ಕಾಂಗ್ರೆಸ್ ಮತ್ತು ಇಂಡಿ ಒಕ್ಕೂಟದ ನಾಯಕರು ಚುರುಕಾಗಿ ಕೆಲಸ ಮಾಡಲು ನೋಡಿ. ನಿಮ್ಮ ಪಕ್ಷ ಅಧಿಕಾರಕ್ಕೆ ಬಂದ ರಾಜ್ಯದಲ್ಲಿ ನ್ಯಾಯಯುತವಾಗಿ ಅಧಿಕಾರಕ್ಕೆ ಬಂದಿದೆಯಾ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Arecanut Price: ಇಂದು ಅಡಿಕೆ ರೇಟ್ ಎಷ್ಟು ನೋಡಿ