Select Your Language

Notifications

webdunia
webdunia
webdunia
webdunia

ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ನೆದರ್ಲ್ಯಾಂಡ್ಸ್ ನಿಂದ ಬಂತು ವಿಶೇಷ ಉಡುಗೊರೆ ಏನದು Video ನೋಡಿ

DK Shivakumar
Photo Credit: X
ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ನೆದರ್ಲ್ಯಾಂಡ್ಸ್ ನಿಂದ ವಿಶೇಷ ಉಡುಗೊರೆಯೊಂದು ಬಂದಿದೆ. ಅದೇನೆಂದು ನೋಡಲು  ಈ ವಿಡಿಯೋ ನೋಡಿ.

ಇಂದು ಡಿಸಿಎಂ ಡಿಕೆ ಶಿವಕುಮಾರ್ ಗೆ 64 ನೇ ಜನ್ಮದಿನ. ರಾಜಕೀಯದಲ್ಲಿ ಕನಕಪುರ ಬಂಡೆ, ಟ್ರಬಲ್ ಶೂಟರ್ ಎಂದೇ ಕರೆಯಿಸಿಕೊಳ್ಳುವ ಡಿಕೆ ಶಿವಕುಮಾರ್ ಪಕ್ಷ ನಿಷ್ಠೆ ವಿಚಾರಕ್ಕೆ ಬಂದರೆ ಸರಿಸಾಟಿಯಿಲ್ಲ ಎನ್ನುವಂತಹ ವ್ಯಕ್ತಿ.

ಇಂದು ಡಿಕೆ ಶಿವಕುಮಾರ್ ಹುಟ್ಟುಹಬ್ಬಕ್ಕೆ ಅವರ ಬೆಂಬಲಿಗರು ಸಾಕಷ್ಟು ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಸಾಕಷ್ಟು ಅಭಿಮಾನಿಗಳು ಅವರಿಗೆ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಆ ಪೈಕಿ ನೆದರ್ಲ್ಯಾಂಡ್ಸ್ ನಿಂದ ಅವರಿಗೆ ವಿಶೇಷ ಉಡುಗೊರೆ ಬಂದಿದೆ.

ಡಿಕೆ ಶಿವಕುಮಾರ್ ಮೂಲತಃ ದೈವಭಕ್ತರು. ಆಗಾಗ ದೇವಾಲಯಗಳಿಗೆ ಭೇಟಿ ನೀಡುತ್ತಿರುತ್ತಾರೆ. ಇದೀಗ ನೆದರ್ಲ್ಯಾಂಡ್ಸ್ ನ ಸ್ನೇಹಿತರು ಅವರಿಗಾಗಿ ತಿರುಪತಿ ತಿಮ್ಮಪ್ಪನ ಮೂರ್ತಿಯೊಂದನ್ನು ಉಡುಗೊರೆಯಾಗಿ ಕಳುಹಿಸಿಕೊಟ್ಟಿದ್ದಾರೆ. ಅದನ್ನು ತಮ್ಮ ಮನೆಯಲ್ಲಿರಿಸಿಕೊಂಡಿರುವ ಡಿಕೆಶಿ ಅದರ ಜೊತೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

ಮೋದಿಗೆ ಅಂತಾರಾಷ್ಟ್ರೀಯ ಸಂಬಂಧ ನಿಭಾಯಿಸಲು ಬರಲ್ಲ: ಡಿಕೆ ಶಿವಕುಮಾರ್