Publish Date: Fri, 15 May 2026 (11:29 IST)
Updated Date: Fri, 15 May 2026 (11:31 IST)
ಬೆಂಗಳೂರು: ಕೇಸರಿ ಪೇಟ ಧರಿಸಲು ಅವಕಾಶವಿಲ್ಲ ಎಂದ ಸಿಎಂ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟಿರುವ ವಿಪಕ್ಷ ನಾಯಕ ಆರ್ ಅಶೋಕ್ ನಿಮಗೆ ಕೇಸರಿ ಶಾಲು, ಪೇಟ ಕಂಡರೆ ಯಾಕೆ ನಡುಕ ಎಂದು ವ್ಯಂಗ್ಯ ಮಾಡಿದ್ದಾರೆ.
ರಾಜ್ಯದಲ್ಲಿ ಮತ್ತೆ ಹಿಜಾಬ್ ವಿವಾದ ಭುಗಿಲೆದ್ದಿದೆ. ಶಾಲಾ, ಕಾಲೇಜುಗಳಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡಿರುವುದು ಹಿಂದೂ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದೆ. ಕಾಂಗ್ರೆಸ್ ಓಲೈಕೆ ರಾಜಕಾರಣ ಎಂದು ಬಿಜೆಪಿ ಟೀಕೆ ಮಾಡಿದೆ.
ಇದರ ನಡುವೆ ಕೇಸರಿ ಶಾಲು, ಪೇಟ ಧರಿಸಲು ಅವಕಾಶವಿಲ್ಲ, ಹಿಜಾಬ್ ಗೆ ಮಾತ್ರ ಅವಕಾಶ ನೀಡಿದ್ದೇವೆ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಆರ್ ಅಶೋಕ್ ಟಾಂಗ್ ಕೊಟ್ಟಿದ್ದಾರೆ. ನಿಮಗೆ ತಿಲಕ ಕಂಡರೆ ನಡುಕ, ಕೇಸರಿ ಕಂಡರೆ ಮೈಯೆಲ್ಲ ಉರಿ, ಹನುಮ ಧ್ವಜ ಕಂಡರೆ ತಳಮಳ, ರಾಮಮಂದಿರ ಎಂದರೆ ಕಿರಿಕಿರಿ.
ಆದರೆ ಅನ್ಯ ಮತೀಯ ಸಂಭ್ರಮಗಳಲ್ಲಿ ಮಾತ್ರ ಗಮಗಮಿಸುವ ಸೆಂಟು ಹೊಡೆದುಕೊಂಡು, ಟೋಪಿ ಹಾಕಿಕೊಂಡು, ನವ ಮದುಮಗನಂತೆ ಸಿಂಗಾರಗೊಳ್ಳುತ್ತೀರಿ.
ಹಿಂದೂಗಳೆಂದರೆ, ಹಿಂದೂಗಳ ನಂಬಿಕೆಗಳೆಂದರೆ, ಹಿಂದೂಗಳ ಆಚರಣೆಗಳೆಂದರೆ, ಹಿಂದೂಗಳ ಧಾರ್ಮಿಕ ಚಿಹ್ನೆಗಳೆಂದರೆ ನಿಮಗೆ ಯಾಕಿಷ್ಟು ಅಸಹನೆ ಸ್ವಾಮಿ, ಯಾಕಿಷ್ಟು ದ್ವೇಷ? ನೀವು ಬರೀ ಅಲ್ಪಸಂಖ್ಯಾತರಿಗೆ ಮಾತ್ರ ಮುಖ್ಯಮಂತ್ರಿ ಅಲ್ಲ ಸ್ವಾಮಿ, ಇಡೀ ರಾಜ್ಯಕ್ಕೆ ಮುಖ್ಯಮಂತ್ರಿ ಅನ್ನೋದನ್ನ ಮರೆಯಬೇಡಿ ಎಂದಿದ್ದಾರೆ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ