Select Your Language

Notifications

webdunia
webdunia
webdunia
webdunia

NEET: ನೀಟ್ ಮರು ಪರೀಕ್ಷೆ ದಿನಾಂಕ ಘೋಷಣೆ: ವಿವರಗಳಿಗೆ ಇಲ್ಲಿ ನೋಡಿ

Students
ನವದೆಹಲಿ: ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ಈಗಾಗಲೇ ನಡೆದ ಪರೀಕ್ಷೆ ರದ್ದುಗೊಂಡಿದೆ. ಇದೀಗ ಮರು ಪರೀಕ್ಷೆ ದಿನಾಂಕವನ್ನು ಘೋಷಿಸಲಾಗಿದೆ. ವಿವರ ಇಲ್ಲಿದೆ.

ಮೇ 3 ರಂದು ನಡೆದಿದ್ದ ನೀಟ್ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನಲೆಯಲ್ಲಿ ರದ್ದುಗೊಂಡಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯ ನಿರ್ಧಾರ ಹಲವು ವಿದ್ಯಾರ್ಥಿಗಳಿಗೆ ಶಾಕ್ ಉಂಟು ಮಾಡಿತ್ತು. ಈಗಾಗಲೇ ಪಟ್ಟ ಶ್ರಮ ವ್ಯರ್ಥವಾಯಿತು ಎಂದು ಎಲ್ಲರೂ ಆತಂಕಿತರಾಗಿದ್ದರು.

ಇದೀಗ ಮರು ಪರೀಕ್ಷೆ ದಿನಾಂಕವನ್ನು ಘೋಷಿಸಲಾಗಿದೆ. ಜೂನ್ 21 ರಂದು ಮರು ಪರೀಕ್ಷೆ ನಡೆಯಲಿದೆ ಎಂದು ಘೋಷಿಸಲಾಗಿದೆ. ನಿನ್ನೆ ರಾತ್ರಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನೇತೃತ್ವದಲ್ಲಿ ತುರ್ತು ಸಭೆ ನಡೆದಿತ್ತು. ಈ ಸಭೆಯಲ್ಲಿ ಮರು ಪರೀಕ್ಷೆ ದಿನಾಂಕ ನಿಗದಿಪಡಿಸಲಾಗಿದೆ.

ಪರೀಕ್ಷೆ ಅಕ್ರಮದ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದ್ದು ಈಗಾಗಲೇ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ. ಇದೊಂದು ಸಂಘಟಿತ ಗ್ಯಾಂಗ್ ನಡೆಸುತ್ತಿರುವ ದಂಧೆ ಎಂದು ಸಿಬಿಐ ತಿಳಿಸಿದೆ. ಇನ್ನು, ಅಕ್ರಮದಲ್ಲಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರದ ಸಿಬ್ಬಂದಿಗಳ ಕೈವಾಡವೂ ಇದೆಯೇ ಎಂದು ತನಿಖೆ ನಡೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್ ಬೆಲೆ ಭಾರೀ ಏರಿಕೆ, ಜನ ಸಾಮಾನ್ಯರಿಗೆ ತಟ್ಟಿದ ಬಿಸಿ