Select Your Language

Notifications

webdunia
webdunia
webdunia
webdunia

ನಾನೇನು ಆಟ ಆಟಕ್ಕೆ ಹೋಗಿದ್ನಾ: ಅಮೆರಿಕಾಗೆ ನೋ ಎಂದ ಕೇಂದ್ರದ ವಿರುದ್ಧ ಪ್ರಿಯಾಂಕ್ ಖರ್ಗೆ ಆಕ್ರೋಶ

Priyank Kharge

Krishnaveni K

ಬೆಂಗಳೂರು , ಗುರುವಾರ, 19 ಜೂನ್ 2025 (10:39 IST)
ಬೆಂಗಳೂರು: ನಾನೇನು  ವಿದೇಶಕ್ಕೆ ಆಟ ಆಡಕ್ಕೆ ಹೋಗಿದ್ನಾ, ಅಮೆರಿಕಾಗೆ ಹೋಗಬೇಡಿ ಎಂದರೆ ಅದಕ್ಕೆ ಕಾರಣ ಕೊಡಬೇಕು. ಅದು ಬಿಟ್ಟು ಕಾರಣವಿಲ್ಲದೇ ಹೋಗಬೇಡಿ ಎಂದರೆ ಹೇಗೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕೇಂದ್ರದ  ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅಧಿಕಾರಿಗಳ ನಿಯೋಗದೊಂದಿಗೆ ಪ್ಯಾರಿಸ್ ಗೆ ತೆರಳಿದ್ದರು. ಅಲ್ಲಿಂದ ವಿವಿಧ ಶೃಂಗಗಳಲ್ಲಿ ಭಾಗಿಯಾಗಲು ಅಮೆರಿಕಾಗೆ ತೆರಳಲು ಬಯಸಿದ್ದರು. ಆದರೆ ಅಷ್ಟರಲ್ಲಿ ಕೇಂದ್ರ ಸರ್ಕಾರ ಖರ್ಗೆ ಮತ್ತು ಅಧಿಕಾರಿಗಳ ಅಮೆರಿಕಾ ಪ್ರವಾಸಕ್ಕೆ ಕ್ಲಿಯರೆನ್ಸ್ ನೀಡಿಲ್ಲ. ಬಳಿಕ ಅಧಿಕಾರಿಗಳಿಗೆ ಕ್ಲಿಯರೆನ್ಸ್ ನೀಡಿತು. ಆದರೆ ಖರ್ಗೆಗೆ ನೀಡಲಿಲ್ಲ. ಹೀಗಾಗಿ ಅವರು ಬೆಂಗಳೂರಿಗೆ ವಾಪಸ್ ಆಗಿದ್ದಾರೆ.

ಬೆಂಗಳೂರಿಗೆ ಬರುತ್ತಿದ್ದಂತೇ ವಿಮಾನ ನಿಲ್ದಾಣದಲ್ಲೇ ಖರ್ಗೆ ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವೇನು ಆಟ ಆಡಕ್ಕೆ ವಿದೇಶಕ್ಕೆ ಹೋಗುತ್ತಿಲ್ಲ. ಕರ್ನಾಟಕಕ್ಕೆ ಬಂಡವಾಳ ತಂದುಕೊಡುವುದು ನಮ್ಮ ಕರ್ತವ್ಯ. ಕರ್ನಾಟಕಕ್ಕೆ ಒಳ್ಳೆಯದಾದರೆ ದೇಶಕ್ಕೂ ಒಳ್ಳೆಯದು ತಾನೇ.ಕರ್ನಾಟಕ ದೇಶದ ಆರ್ಥಿಕತೆಯ ಎಂಜಿನ್. ಹೀಗಿರುವಾಗ  ವಿನಾಕಾರಣ ನಮ್ಮ ಪ್ರಯಾಣಕ್ಕೆ ಅನುಮತಿ ನಿರಾಕರಿಸುವುದು ಸರಿಯಲ್ಲ.

ಕಳೆದ ಬಾರಿ ಹೋಗಿದ್ದಾಗ ಕರ್ನಾಟಕಕ್ಕೆ ಸಾಕಷ್ಟು ಬಂಡವಾಳ ತಗೊಂಡು ಬಂದಿದ್ವಿ. ತಿರಸ್ಕಾಋ ಮಾಡಲಿ. ಆದರೆ ಅದಕ್ಕೆ ಕಾರಣ ಕೊಡಬೇಕಲ್ವಾ? ಯಾವುದೇ ಯೋಜನೆ ಘೋಷಣೆ ಮಾಡಿದರೂ ಪ್ರಾರಂಭವಾಗೋದು ಕರ್ನಾಟಕದಲ್ಲಿ. ಇಲ್ಲಿ ಬಂಡವಾಳ ಹೂಡಿಕೆಗೆ ಅಷ್ಟು ಅವಕಾಶಗಳಿವೆ. ಹಾಗಿದ್ದಾಗ ತಿರಸ್ಕಾರ ಮಾಡುವುದು ಎಷ್ಟು ಸರಿ ಎಂದು ಖರ್ಗೆ ಕಿಡಿ ಕಾರಿದ್ದಾರೆ. ಇದರ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಮಾತನಾಡಿ ಬಳಿಕ ಮಾಧ್ಯಮ ಗೋಷ್ಠಿ ನಡೆಸುತ್ತೇನೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.


Share this Story:

Follow Webdunia kannada

ಮುಂದಿನ ಸುದ್ದಿ

Viral video: ಮಾಂಗಲ್ಯ ಸರ ತೆಗೆಯಲು ಬಂದ ವೃದ್ಧ ದಂಪತಿ: ನೆಟ್ಟಿಗರ ಮನಗೆದ್ದ ಅಂಗಡಿ ಮಾಲಿಕ