ಪ್ರಧಾನಿ ಮೋದಿ ಹೊಣೆಗಾರಿಕೆಯಿಲ್ಲದ ಪಲಾಯನವಾದಿ: ಹಳೇ ವಿಡಿಯೋ ಹಂಚಿಕೊಂಡ ಪ್ರಿಯಾಂಕ್ ಖರ್ಗೆ

Krishnaveni K
ಬುಧವಾರ, 12 ನವೆಂಬರ್ 2025 (14:40 IST)
ಬೆಂಗಳೂರು: ದೆಹಲಿ ಸ್ಪೋಟದ ಬಳಿಕ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿರುವ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೊಣೆಗಾರಿಕೆಯಿಲ್ಲದ ಪಲಾಯನವಾದಿ ಎಂದಿದ್ದಾರೆ.

ಗುಜರಾತ್ ನ ಮುಖ್ಯಮಂತ್ರಿಯಾಗಿದ್ದಾಗ ಮೋದಿಯವರು ದೇಶದ ನಾಯಕನ ಹೊಣೆಗಾರಿಕೆ ಮಾತನಾಡಿರುವ ಹಳೆಯ ವಿಡಿಯೋ ಹಂಚಿಕೊಂಡ ಪ್ರಿಯಾಂಕ್ ಖರ್ಗೆ, ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೋದಿಗೆ ದೆಹಲಿಯಲ್ಲಿ ಸ್ಪೋಟವಾದಾಗ ದೇಶದ ಹಿತಕ್ಕಿಂತ ತನ್ನ ಸ್ನೇಹಿತ ಅದಾನಿಗೆ ಸಹಾಯವಾಗುವ ಭೂತಾನ್ ನ ಜಲವಿದ್ಯುತ್ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕುವುದೇ ಮುಖ್ಯವಾಗಿತ್ತು ಎಂದು ಟೀಕಿಸಿದ್ದಾರೆ.

ಪ್ರಧಾನಿ ಮೋದಿಯ ಹೊಣೆಗಾರಿಕೆಯನ್ನು ಮುಖ್ಯಮಂತ್ರಿ ಮೋದಿಗಿಂತ ಚೆನ್ನಾಗಿ ಯಾರೂ ಬಯಲು ಮಾಡಲು ಸಾಧ್ಯವಿಲ್ಲ. ಪ್ರಧಾನಿ ಪಾಲಿಗೆ ಹೊಣೆಗಾರಿಕೆ ಎನ್ನುವುದು ಇತರರಿಗೆ ಮಾತ್ರ ಅನ್ವಯಿಸುತ್ತದೆ. ತಾನು ಪ್ರಧಾನಿಯಾದಾಗ ಅನ್ವಯಿಸುವುದಿಲ್ಲ. ವಿರೋಧ ಪಕ್ಷದಲ್ಲಿದ್ದಾಗ ಹೊಣೆಗಾರಿಕೆ ಬಗ್ಗೆ ಪಾಠ ಮಾಡುವ ಮೋದಿ ತಾವು ಪ್ರಧಾನಿಯಾದಾಗ ನುಣುಚಿಕೊಳ್ಳುತ್ತಿದ್ದಾರೆ.

ಪ್ರಧಾನಿ ಮೋದಿ ಓರ್ವ ಪಲಾಯನವಾದಿ, ಸುದ್ದಿಗೋಷ್ಠಿಯಲ್ಲಿ ಪಾಲ್ಗೊಳ್ಳಲ್ಲ, ಸಂಸತ್ತನ್ನು ಕಡೆಗಣಿಸುತ್ತಾರೆ. ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲು ವಿಷಯಾಂತರ ಮಾಡುತ್ತಾರೆ ಎಂದು ಪ್ರಿಯಂಕ್ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಣಿ ಚನ್ನಮ್ಮ ಮೃಗಾಲಯದಲ್ಲಿ ಇದೆಂಥಾ ಘಟನೆ, ಕೃಷ್ಣಮೃಗಗಳಿಗೆ ಆಗಿದ್ದದಾರೇನು

ಮತಗಳ್ಳತನ ಚುನಾವಣೆ ತಂತ್ರ, ರಾಹುಲ್ ಗಾಂಧಿ ವಿದೇಶದಲ್ಲಿ ಕಾಫಿ ಕುಡಿಯುತ್ತಿದ್ದರು: ಯದುವೀರ್ ಒಡೆಯರ್

ಜಮ್ಮು ಕಾಶ್ಮೀರದ ನೌಗಮ್ ಠಾಣೆಯಲ್ಲಿ ಸ್ಫೋಟ, ಆಗಿದ್ದೇನು ಗೊತ್ತಾ

ಬಿಜೆಪಿ ಗೆದ್ದರೆ ಮತಗಳ್ಳತನ, ಕಾಂಗ್ರೆಸ್ ಗೆದ್ದರೆ ಎಲ್ಲಾ ಚೆನ್ನಾಗಿರುತ್ತಾ: ಶೋಭಾ ಕರಂದ್ಲಾಜೆ

Arecanut Price: ಅಡಿಕೆ, ಕೊಬ್ಬರಿ ಇಂದಿನ ಬೆಲೆ ಇಲ್ಲಿದೆ

ಮುಂದಿನ ಸುದ್ದಿ
Show comments