ನಿಮ್ಮ ನೆರೆಹೊರೆಯಲ್ಲಿರುವ ಸಾಬರ ಬಗ್ಗೆಯೂ ಎಚ್ಚರಿಕೆಯಿಂದಿರಿ: ಪ್ರತಾಪ್ ಸಿಂಹ

Krishnaveni K
ಬುಧವಾರ, 12 ನವೆಂಬರ್ 2025 (14:26 IST)
ಬೆಂಗಳೂರು: ಮುಸ್ಲಿಮರು ಬಡತನ, ನಿರುದ್ಯೋಗದಿಂದ ಭಯೋತ್ಪಾದಕರಾಗುತ್ತಿಲ್ಲ. ನಿಮ್ಮ ನೆರೆಹೊರೆಯಲ್ಲಿರುವ ಸಾಬರ ಬಗ್ಗೆಯೂ ಎಚ್ಚರಿಕೆಯಿಂದಿರಿ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ.

ದೆಹಲಿ ಬಾಂಬ್ ಸ್ಪೋಟದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಅವರು, ‘ಮುಸಲ್ಮಾನರು ಬಡತನದಿಂದಾಗಿ ಭಯೋತ್ಪಾದನೆಯತ್ತ ಆಕರ್ಷಿತರಾಗುತ್ತಿದ್ದಾರೆ ಎಂದು ನಮಗೆ ಕತೆ ಹೇಳುತ್ತಿದ್ದರು. ಆದರೆ ಈಗ ಅರೆಸ್ಟ್ ಆದ ಡಾಕ್ಟರ್ ಗಳ ಲಿಸ್ಟ್ ನೋಡಿದ್ರೆ ಇವರು ಭಯೋತ್ಪಾದನೆಯತ್ತ ಆಕರ್ಷಿತರಾಗಲು ಬಡತನ ಕಾರಣ ಅಲ್ಲ, ಇವರ ಮತಾಂಧತೆ, ಮನಸ್ಥಿತಿಯೇ ಕಾರಣ ಎಂದು ಅವರು ಹೇಳಿದ್ದಾರೆ.

ಇದೀಗ ಜಗತ್ತಿಗೆ ಪಿಡುಗಾಗಿ ಕಾಡುತ್ತಿದೆ, ಇದಕ್ಕೆ ಬಡತನ ಕಾರಣ ಅಲ್ಲ. ಪುರುಸೊತ್ತಿಲ್ಲದೇ ಮಕ್ಕಳನ್ನು ಹುಟ್ಟಿಸ್ಬೇಕಾದರೆ ಅದಕ್ಕೆ ಒಳ್ಳೇ ವಿದ್ಯಾಭ್ಯಾಸ ಕೊಡಿಸಬೇಕು ಎನ್ನುವ  ಯೋಚನೆ ಅವರಿಗಿರಬೇಕಿತ್ತು. ಅದನ್ನೂ ಬಿಡಿ, ಕಲಿತು ಡಾಕ್ಟರ್ ಗಳಾಗಿರುವ ಇವರೆಲ್ಲಾ ದೇಶಕ್ಕೇ ಬಾಂಬ್ ಇಡುವ ಯೋಜನೆ ಹಾಕ್ತಾರೆ ಎಂದರೆ ನೀವೇ ಯೋಚನೆ ಮಾಡಿ. ಹಿಂದೆ ಇಂಡಿಯನ್ ಮುಜಾಹಿದ್ದೀನ್ ಸಂಘಟನೆ ಸಕ್ರಿಯವಾಗಿದ್ದಾಗ ಅದರ ಮೇಲ್ ಗಳನ್ನು ಕಳುಹಿಸುತ್ತಿದ್ದವನು ಯಾರು? ಗೂಗಲ್ ನೌಕರನಾಗಿದ್ದವನು. ಅಂದರೆ ಇಂದು ಶಿಕ್ಷಿತ ಮುಸಲ್ಮಾನರೇ ಭಯೋತ್ಪಾದನೆಯಲ್ಲಿ ತೊಡಗಿದ್ದಾರೆ ಎಂದರೆ ಅದಕ್ಕೆ ಬಡತನ, ನಿರುದ್ಯೋಗ ಯಾವುದೂ ಕಾರಣ ಅಲ್ಲ. ಅವರ ಮನಸ್ಥಿತಿ, ದೇಶ ವಿರೋಧಿ ಭಾವನೆ, ಇಲ್ಲಿ ಅನ್ನ ತಿಂದು ಬೇರೆ ಕಡೆ ನಿಷ್ಠೆಯನ್ನು ಇಟ್ಟುಕೊಂಡಿರುವುದೇ  ಕಾರಣ. ಅದಕ್ಕೇ ನಾನು ಈ ಮೂಲಕ ಮನವಿ ಮಾಡುತ್ತೇನೆ. ನಿಮ್ಮ ನೆರೆಹೊರೆಯಲ್ಲಿದ್ದಾರಲ್ಲಾ ಅವರ ಬಗ್ಗೆಯೂ ಎಚ್ಚರಿಕೆಯಿಂದಿರಿ, ಅವರೂ ಡಾಕ್ಟರ್ ಆಗಿದ್ದಾರೆ, ಇಂಜಿನಿಯರಿಂಗ್ ಆಗಿದ್ದಾರೆ, ಯಾವುದೋ ಗುಜುರಿ ಸಾಬಿಗಳ ಥರಾ ಆಡಲ್ಲ ಎಂದು ನೀವು ಅಂದುಕೊಳ್ಳಕ್ಕೇ ಹೋಗಬೇಡಿ. ಈವತ್ತು ಯಾರು ಹೆಚ್ಚು ಶಿಕ್ಷಿತರು ಇದ್ದಾರಲ್ಲಾ ಅವರೇ ಇಂತಹ ದೇಶ ಒಡೆಯುವ ಕೆಲಸ ಮಾಡುತ್ತಿರೋದು’ ಎಂದು ಪ್ರತಾಪ್ ಸಿಂಹ ಎಚ್ಚರಿಕೆ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬಿಹಾರ, ಉತ್ತರ ಪ್ರದೇಶ ನಡುವೆ ರಾಮ ಸೀತೆಯ ಬಾಂಧವ್ಯವಿದೆ: ಯೋಗಿ

ಸಿದ್ದರಾಮಯ್ಯ ಸರ್ಕಾರದಲ್ಲೂ ಭ್ರಷ್ಟಾಚಾರವಿದೆ: ಸಂತೋಷ್ ಹೆಗ್ಡೆ

ದೆಹಲಿ ಸ್ಫೋಟ ಪ್ರಕರಣ, ಮತ್ತೆ ತೆರೆದ ಲಾಲ್ ಕ್ವಿಲಾ ಮೆಟ್ಟೋ ನಿಲ್ದಾಣ

ಬಿಹಾರ ಮಹಾಘಟಬಂಧನ್‌ಗೆ ಹೀನಾಯ ಸೋಲು, ಲಾಲು ಕುಟುಂಬದಲ್ಲಿ ಭಾರೀ ಬೆಳವಣಿಗೆ

ಶಬರಿಮಲೆ ಯಾತ್ರೆ ಶುರು, ದರ್ಶನಕ್ಕೆ ಆನ್‌ಲೈನ್ ಬುಕ್ಕಿಂಗ್ ಕಡ್ಡಾಯ

ಮುಂದಿನ ಸುದ್ದಿ
Show comments