ಆರ್ ಎಸ್ಎಸ್ ನವರು ನಮ್ ಹುಡುಗರಿಗೆ ಧರ್ಮದ ಬಗ್ಗೆ, ದೇಶದ ಬಗ್ಗೆ ಏನೇನೋ ಹೇಳ್ತಿದ್ರು: ಪ್ರಿಯಾಂಕ್ ಖರ್ಗೆ

Krishnaveni K
ಶುಕ್ರವಾರ, 31 ಅಕ್ಟೋಬರ್ 2025 (14:22 IST)
ಬೆಂಗಳೂರು: ಆರ್ ಎಸ್ಎಸ್ ನವರು ನಮ್ಮ ಕಾಲೇಜು ಹುಡುಗರಿಗೆ ಫೋನ್ ಮಾಡಿ ಕರೆದು ಧರ್ಮದ ಬಗ್ಗೆ, ದೇಶದ ಬಗ್ಗೆ ಏನೇನೋ ಹೇಳ್ತಿದ್ರು, ಅದಕ್ಕೇ ಅವರಂತಹ ಎಲ್ಲಾ ಸಂಘದವರ ಚಟುವಟಿಕೆಗಳಿಗೆ ನಿಯಂತ್ರಣ ಹೇರಲು ಸಿಎಂಗೆ ಪತ್ರ ಬರೆದಿದ್ದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಚಿತ್ತಾಪುರದಲ್ಲಿ ಆರ್ ಎಸ್ಎಸ್ ಪಥಸಂಚಲನ ವಿಚಾರ ಈಗ ನಿಮ್ಮ ಹಾಗೂ ಸಂಘದ ನಡುವಿನ ಪ್ರತಿಷ್ಠೆಯ ವಿಚಾರವಾಗಿದೆಯೇ ಎಂದು ಮಾಧ್ಯಮಗಳು ಪ್ರಶ್ನಿಸಿದಾಗ ಸಚಿವ  ಪ್ರಿಯಾಂಕ್ ಖರ್ಗೆ ಈ ಎಲ್ಲಾ ವಿವಾದ ಹುಟ್ಟಿಕೊಳ್ಳಲು ಕಾರಣವೇನೆಂದು ಹೇಳಿದ್ದಾರೆ.

‘ಆರ್ ಎಸ್ಎಸ್ ಪಥಸಂಚಲನಕ್ಕೂ ನನಗೂ ಏನು ಸಂಬಂಧ? ಆರ್ ಎಸ್ಎಸ್ ನವರು ಇಷ್ಟು ಜನ ಶಾಸಕರಿದ್ದರೂ ನನ್ನನ್ನೇ ಯಾಕೆ ಬೈಯುತ್ತಿದ್ದಾರೆ? ನೋಡಿ ಕೇಂದ್ರ ಗೃಹ ಸಚಿವರು ಹೇಳಿದಂತೆ ಇದರ ಮೂಲ ತಿಳಿದುಕೊಳ್ಳಿ. ಸಮಸ್ಯೆ ಆರಂಭವಾಗಿದ್ದು ಎಲ್ಲಿಂದ?

 ನಮ್ಮ ಕಲಬುರಗಿ ಜಿಲ್ಲೆಯ ಕಾಲೇಜು ಹುಡುಗರು ಒಮ್ಮೆ ನಮಗೆ ಹೀಗೆ ಸಂಘದವರು ಫೋನ್ ಮಾಡಿ ಪಥಸಂಚಲನಕ್ಕೆ ಬರಬೇಕು ಎಂದು ಹೇಳ್ತಿದ್ದಾರೆ. ವಾಹನ ವ್ಯವಸ್ಥೆ ಮಾಡಿಕೊಡ್ತೀರಾ ಕೇಳಿದ್ರು. ನನಗೆ ಆವಾಗ ಗೊತ್ತಾಯ್ತು. ಆಗ ನಾನು ಹೇಳಿದೆ, ಯಾರು ಫೋನ್ ಮಾಡಿದ್ರು ನಮ್ಮ ಲೀಡರ್ ಗಳ ಮಕ್ಳು. ಕಾಲೇಜು ಹುಡುಗರೆಲ್ಲಾ ಬಡವರ ಮಕ್ಕಳು. ಅದಕ್ಕೆ ನಾನು ಹೇಳಿದೆ, ನೋಡಿ ನೀವು ಅಷ್ಟು ದೂರದಿಂದ ಊರು ಬಿಟ್ಟು ಇಲ್ಲಿಗೆ ಬಂದು ಹಾಸ್ಟೆಲ್ ನಲ್ಲಿದ್ದು ಓದುತ್ತಿದ್ದೀರಾ. ನೀವು ವಿದ್ಯಾಭ್ಯಾಸ ಮಾಡುವುದು ಬಿಟ್ಟು ಇದೆಲ್ಲಾ ಯಾಕೆ ಮಾಡ್ತೀರಾ ಕೇಳಿದೆ. ಅದಕ್ಕೆ ಅವರು ಇಲ್ಲ ಸಾರ್ ಹೀಗೆ ದಿನಾ ಬರ್ತಾರೆ, ಕರೀತಾರೆ ಎಂದ್ರು. ಆಗ ನಾನು ಅವರು ಏನು ಕಲಿಸ್ತಾರೆ ಎಂದೆ. ಅದೇನೋ ಧರ್ಮ ಪ್ರಚಾರ ಮಾಡ್ತಾರೆ, ದೇಶದ ಬಗ್ಗೆ ಏನೇನೋ ಹೇಳ್ತಾರೆ ಎಂದ್ರು. ಆಗ ನಾನು ಸಿಎಂಗೆ ಪತ್ರ ಬರೆದು ಆರ್ ಎಸ್ಎಸ್ ಮಾತ್ರವಲ್ಲ, ಅಂತಹ ಎಲ್ಲಾ ಸಂಘಟನೆಗಳ ಚಟುವಟಿಕೆಗಳಿಗೆ ನಿಯಂತ್ರಣ ಹೇರುವಂತೆ ಸಿಎಂಗೆ ಪತ್ರ ಬರೆದಿದ್ದೆ’ ಎಂದಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅನ್ನದಾತರ ಜೊತೆ ಜನ್ಮದಿನ ಯಾವತ್ತೂ ಮರೆಯಲಾರೆ: ವಿಜಯೇಂದ್ರ

ತಮ್ಮ ಪಕ್ಷದಲ್ಲೇ ಬೇರೆಯವರಿಗೆ ಅವಕಾಶ ಕೊಡದ ಗಾಂಧಿ ಕುಟುಂಬದವರು ಸೇನೆ ಬಗ್ಗೆ ಮಾತನಾಡ್ತಾರೆ: ಬಿಜೆಪಿ ವ್ಯಂಗ್ಯ

ಕರ್ನಾಟಕ ಎಸ್ಎಸ್ಎಲ್ ಸಿ, ದ್ವಿತೀಯ ಪಿಯುಸಿ ಪರೀಕ್ಷೆ ವೇಳಾಪಟ್ಟಿ ಇಲ್ಲಿದೆ ನೋಡಿ

ದೇವರು ಕೊಟ್ರೂ ಪೂಜಾರಿ ಕೊಡಲಿಲ್ಲ: ಕೇಂದ್ರ ಜಿಎಸ್ ಟಿ ಇಳಿಸಿದ್ದರೆ ನಂದಿನಿ ತುಪ್ಪದ ಬೆಲೆ ಏರಿಸಿದ ಕೆಎಂಎಫ್

ಬ್ರೆಜಿಲ್ ಮಾಡೆಲ್ ಹರ್ಯಾಣದಲ್ಲಿ 22 ಬಾರಿ ವೋಟ್: ರಾಹುಲ್ ಗಾಂಧಿಯಿಂದ ಮತ್ತೊಂದು ಬಾಂಬ್

ಮುಂದಿನ ಸುದ್ದಿ
Show comments