Select Your Language

Notifications

webdunia
webdunia
webdunia
webdunia

ಆರ್ ಎಸ್ಎಸ್ ಕ್ವಿಜ್ ಹಾಗಿರ್ಲಿ, ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿ ಮಾಡಿ: ಪ್ರಿಯಾಂಕ್ ಖರ್ಗೆಗೆ ನೆಟ್ಟಿಗರ ಕ್ಲಾಸ್

Priyank Kharge

Krishnaveni K

ಬೆಂಗಳೂರು , ಬುಧವಾರ, 29 ಅಕ್ಟೋಬರ್ 2025 (08:56 IST)
ಬೆಂಗಳೂರು: ಆರ್ ಎಸ್ಎಸ್ ಚಟುವಟಿಕೆಗಳಿಗೆ ಸರ್ಕಾರ ಹೇರಿದ್ದ ನಿರ್ಬಂಧಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡುತ್ತಿದ್ದಂತೇ ಇತ್ತ ಸಚಿವ ಪ್ರಿಯಾಂಕ್ ಖರ್ಗೆ ಸಂಘದ ಕುರಿತಂತೆ ಬಿಜೆಪಿ ನಾಯಕರಿಗೆ ಕೆಲವು ಕ್ವಿಜ್ ಎಂದು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ. ಇದಕ್ಕೆ ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಆರ್ ಎಸ್ಎಸ್ ವಿರುದ್ಧ ಪ್ರಿಯಾಂಕ್ ಖರ್ಗೆ ಸಮರ ಇನ್ನೂ ನಿಂತಿಲ್ಲ. ಆರ್ ಎಸ್ಎಸ್ ಶತಮಾನೋತ್ಸವ ಸಂದರ್ಭದಲ್ಲಿ ಪಥಸಂಚಲನ ಮಾಡುವುದಕ್ಕೆ ಸರ್ಕಾರ ನಿರ್ಬಂಧ ಹೇರಿತ್ತು. ಇದರ ಬೆನ್ನಲ್ಲೇ ಆರ್ ಎಸ್ಎಸ್ ಕೋರ್ಟ್ ಮೆಟ್ಟಿಲೇರಿತ್ತು. ಇದೀಗ ಕೋರ್ಟ್ ಸರ್ಕಾರದ ಆದೇಶಕ್ಕೆ ಮಧ್ಯಂತರ ತಡೆ ನೀಡಿದೆ.

ಇದರ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಆರ್ ಎಸ್ಎಸ್ ಕುರಿತ ನನ್ನ ಈ ಕ್ವಿಜ್ ಗೆ ಬಿಜೆಪಿ ನಾಯಕರು ಉತ್ತರ ಕೊಡಲಿ ಎಂದು ಒಂದಷ್ಟು ಪ್ರಶ್ನೆಗಳನ್ನು ಕೇಳಿದ್ದಾರೆ. ಆರ್ ಎಸ್ಎಸ್ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಲು ನಿರಾಕರಿಸಿತ್ತು, ಆರ್ ಎಸ್ಎಸ್ ರಾಷ್ಟ್ರಧ್ವಜ ಹಾರಿಸಲು ನಿರಾಕರಿಸಿತ್ತು, ಗಾಂಧೀಜಿ ಹತ್ಯೆಯನ್ನು ಆರ್ ಎಸ್ಎಸ್ ಸಂಭ್ರಮಿಸಿತ್ತು ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಇದೆಲ್ಲಾ ಹೌದಾ ಅಲ್ವಾ ನೀವೇ ಹೇಳಿ ಎಂದು ಲಿಸ್ಟ್ ಮಾಡಿದ್ದರು.

ಇದಕ್ಕೆ ನೆಟ್ಟಿಗರು ಸಾಕಷ್ಟು ಸಂಖ್ಯೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಆರ್ ಎಸ್ಎಸ್ ಕ್ವಿಜ್ ಹಾಗಿರಲಿ, ಮೊದಲು ನಿಮ್ಮ ಕ್ಷೇತ್ರದ ಅಭಿವೃದ್ಧಿ ಕಡೆ ಗಮನ ಕೊಡಿ. ನಿಮ್ಮ ಜಿಲ್ಲೆ ಅತ್ಯಂತ ಹಿಂದುಳಿದ ಜಿಲ್ಲೆಯಾಗಿದೆಯಂತೆ ಹೌದಾ ಎಂದು ಪ್ರಶ್ನಿಸಿದ್ದಾರೆ. ಮತ್ತೆ ಕೆಲವರು ನ್ಯಾಯಾಲಯವೇ ನಿಮ್ಮ ಸರ್ಕಾರದ ನಿರ್ಧಾರಕ್ಕೆ ತಡೆ ನೀಡಿದೆ. ಇನ್ನೂ ನಿಂತಿಲ್ವಾ ನಿಮ್ಮ ಆರ್ ಎಸ್ಎಸ್ ಸಮರ ಎಂದು ಪ್ರಶ್ನಿಸಿದೆ. ಈ ನಡುವೆ ಕೆಲವರು ಪ್ರಿಯಾಂಕ್ ಸರಿಯಾಗಿಯೇ ಪ್ರಶ್ನೆ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

Karnataka Weather: ಇಂದೂ ಇರಲಿದೆಯಾ ಸೈಕ್ಲೋನ್ ಮೊಂಥಾ ಇಫೆಕ್ಟ್, ಇಲ್ಲಿದೆ ಹವಾಮಾನ ವರದಿ